ಆಜೀವ ನಿಷೇಧ ವಿರುದ್ಧ ಶ್ರೀಶಾಂತ್ ಅರ್ಜಿ: ಬಿಸಿಸಿಐಗೆ ಹೈಕೋರ್ಟ್ ನೋಟಿಸ್

Update: 2017-05-22 17:57 GMT

ಕೊಚ್ಚಿ, ಮೇ 22: ಆರನೆ ಐಪಿಎಲ್‌ನಲ್ಲಿ ಬೆಳಕಿಗೆ ಬಂದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಿಸಿಸಿಐ ತನ್ನ ವಿರುದ್ಧ ವಿಧಿಸಿರುವ ಆಜೀವ ನಿಷೇಧವನ್ನು ಪ್ರಶ್ನಿಸಿ ಕ್ರಿಕೆಟಿಗ ಶ್ರೀಶಾಂತ್ ಸಲ್ಲಿಸಿರುವ ಅರ್ಜಿಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇರಳ ಹೈಕೋರ್ಟ್ ಕ್ರಿಕೆಟ್ ಮಂಡಳಿಗೆ ಸೂಚಿಸಿದೆ.

ಸೋಮವಾರ ನಡೆದ ವಿಚಾರಣೆಯಲ್ಲಿ ಜಸ್ಟಿಸ್ ಪಿ.ಬಿ. ಸುರೇಶ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಬಿಸಿಸಿಐ ನಿಲುವನ್ನು ಸ್ಪಷ್ಟಪಡಿಸುವಂತೆ ಆದೇಶಿಸಿ ಆಡಳಿತಾಧಿಕಾರಿ ಸಮಿತಿಯ ಅಧ್ಯಕ್ಷ ವಿನೋದ್ ರಾಯ್‌ಗೆ ನೋಟಿಸ್ ಕಳುಹಿಸಿದೆ. ಜೂ.19ಕ್ಕೆ ವಿಚಾರಣೆ ಮುಂದೂಡಿದೆ.

ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ದೋಷ ಮುಕ್ತನಾಗಿದ್ದರೂ ಕ್ರಿಕೆಟ್‌ನಿಂದ ತನ್ನನ್ನು ನಿಷೇಧಿಸಿರುವ ಬಿಸಿಸಿಐ ವಿರುದ್ಧ ಶ್ರೀಶಾಂತ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿ ಬಿಸಿಸಿಐ ನ್ಯಾಯಾಲಯಕ್ಕೆ ಕೌಂಟರ್ ಅಫಿಡಾವಿಟ್ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News