ಮುಂದಿನ ವರ್ಷ ಐಪಿಎಲ್‌ನಲ್ಲಿ ಚೆನ್ನೈ, ರಾಜಸ್ಥಾನ ದರ್ಬಾರ್

Update: 2017-05-22 18:25 GMT

ಚೆನ್ನೈ, ಮೇ 22: ಐಪಿಎಲ್ ಆಡಳಿತ ಮಂಡಳಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಈವರ್ಷದ ರನ್ನರ್‌ಅಪ್ ಪುಣೆ ಹಾಗೂ ಗುಜರಾತ್ ಲಯನ್ಸ್ ತಂಡಗಳು ಕೂಟದಿಂದ ನಿರ್ಗಮಿಸಲಿದ್ದು, 11ನೆ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ವಾಪಸಾಗಲಿವೆ.

ಐಪಿಎಲ್ ಫಿಕ್ಸಿಂಗ್ ಹಗರಣದಲ್ಲಿ ರಾಜಸ್ಥಾನ ಹಾಗೂ ಚೆನ್ನೈ ತಂಡಗಳ ಮಾಲಕರು ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಈ ಎರಡು ತಂಡಗಳನ್ನು ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು.

ಹತ್ತನೆ ಆವೃತ್ತಿಯ ಐಪಿಎಲ್ ಟೂರ್ನಿ ಕೊನೆಗೊಂಡ ತಕ್ಷಣವೇ ಮುಂಬರುವ ಋತುವಿನಲ್ಲಿ ತಾನು ವಾಪಸಾಗುತ್ತಿರುವುದಾಗಿ ಚೆನ್ನೈ ಸೂಪರ್ ಕಿಂಗ್ಸ್ ಘೋಷಿಸಿದೆ.

ಮುಂಬೈ ತಂಡ ರವಿವಾರ ಪುಣೆಯನ್ನು ಸೋಲಿಸುವ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ಟ್ರೋಫಿ ಜಯಿಸಿದ ಸಾಧನೆ ಮಾಡಿತು. ಚೆನ್ನೈ ಹಾಗೂ ಕೆಕೆಆರ್‌ನ ಸಾಧನೆಯನ್ನು ಹಿಂದಿಕ್ಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News