ವಿಂಬಲ್ಡನ್‌ಗೆ ಅಝರೆಂಕಾ ವಾಪಸ್

Update: 2017-05-22 18:09 GMT

ಪ್ಯಾರಿಸ್, ಮೇ 22: ಈ ವರ್ಷದ ಜುಲೈನಲ್ಲಿ ನಡೆಯಲಿರುವ ವಿಂಬಲ್ಡನ್ ಟೂರ್ನಿಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಯೋಜನೆಗಿಂತ ಮೊದಲೇ ಸಕ್ರಿಯ ಟೆನಿಸ್‌ಗೆ ವಾಪಸಾಗುವೆ ಎಂದು ವಿಶ್ವದ ಮಾಜಿ ನಂ.1 ಆಟಗಾರ್ತಿ ವಿಕ್ಟೋರಿಯ ಅಝರೆಂಕಾ ಹೇಳಿದ್ದಾರೆ.

‘‘ನನ್ನ ತರಬೇತಿ ಉತ್ತಮವಾಗಿ ನಡೆಯುತ್ತಿದೆ. ಸ್ಪರ್ಧೆಗೆ ಸಜ್ಜಾಗಿದ್ದೇನೆ.ವಿಂಬಲ್ಡನ್‌ಗೆ ಮೊದಲೇ ಒಂದು ಗ್ರಾಸ್‌ಕೋರ್ಟ್ ಟೂರ್ನಿಯಲ್ಲಿ ಆಡುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ಏಳು ತಿಂಗಳ ಹಿಂದೆ ಗಂಡುಮಗು ಲಿಯೋಗೆ ಜನ್ಮ ನೀಡಿರುವ ಅಝರೆಂಕಾ ತಿಳಿಸಿದ್ದಾರೆ.

ವಿಂಬಲ್ಡನ್ ಜು.3 ರಿಂದ ಆರಂಭವಾಗಲಿದೆ. ಇದಕ್ಕೆ ಮೊದಲು ಹಾಲೆಂಡ್, ನಾಟಿಂಗ್‌ಹ್ಯಾಮ್, ಬರ್ಮಿಂಗ್‌ಹ್ಯಾಮ್ ಹಾಗೂ ಈರ್ಸ್ಟ್‌ಬೌರ್ನ್‌ನಲ್ಲಿ ಅಭ್ಯಾಸ ಪಂದ್ಯಗಳು ನಡೆಯುತ್ತವೆ.

2 ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಅಝರೆಂಕಾ ಈ ಹಿಂದೆ ಜುಲೈ ಅಂತ್ಯದಲ್ಲಿ ಕ್ಯಾಲಿಫೋನಿಯ ಓಪನ್‌ನಲ್ಲಿ ಟೆನಿಸ್‌ಗೆ ವಾಪಸಾಗುವ ಇಂಗಿತ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News