ಶ್ರೀಲಂಕಾವನ್ನು ಸೋಲಿಸಿದ ಸ್ಕಾಟ್ಲೆಂಡ್!

Update: 2017-05-22 18:11 GMT

ಲಂಡನ್, ಮೇ 22: ಕೈಲ್ ಕೊಟ್ಝೆರ್ ಹಾಗೂ ಮ್ಯಾಥ್ಯೂಸ್ ಕ್ರಾಸ್ ಸಿಡಿಸಿದ ಶತಕದ ನೆರವಿನಿಂದ ಸ್ಕಾಟ್ಲೆಂಡ್ ತಂಡ ಇದೇ ಮೊದಲ ಬಾರಿ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿ ಐತಿಹಾಸಿಕ ಸಾಧನೆ ಮಾಡಿದೆ.

ರವಿವಾರ ಇಲ್ಲಿ ನಡೆದ ಏಕದಿನ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾವನ್ನು 50 ಓವರ್‌ಗಳಲ್ಲಿ 287 ರನ್‌ಗೆ ನಿಯಂತ್ರಿಸಿತು. ಆರಂಭಿಕ ಆಟಗಾರರಾದ ಕೊಟ್ಝೆರ್(118, 84 ಎಸೆತ, 15 ಬೌಂಡರಿ, 4 ಸಿಕ್ಸರ್) ಹಾಗೂ ಕ್ರಾಸ್(ಅಜೇಯ 106,123 ಎಸೆತ) ಮೊದಲ ವಿಕೆಟ್‌ಗೆ 201 ರನ್ ಜೊತೆಯಾಟ ನಡೆಸಿ ಸ್ಕಾಟ್ಲೆಂಡ್‌ನ ಯಶಸ್ವಿ ಚೇಸಿಂಗ್‌ಗೆ ಭದ್ರಬುನಾದಿ ಹಾಕಿಕೊಟ್ಟರು. ಸ್ಕಾಟ್ಲೆಂಡ್ 42.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು.

ಸ್ಕಾಟ್ಲೆಂಡ್ ಐಸಿಸಿ ಪೂರ್ಣ ಸದಸ್ಯತ್ವದ ಹೊಂದಿರುವ ರಾಷ್ಟ್ರದ ವಿರುದ್ಧ ಮೊದಲ ಬಾರಿ ಜಯ ಸಾಧಿಸಿತು. 2015ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡವನ್ನು ಸ್ಕಾಟ್ಲೆಂಡ್‌ನ ವಿರುದ್ಧ 148 ರನ್‌ಗಳಿಂದ ಜಯ ಸಾಧಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾದ ಪರ ದಿನೇಶ್ ಚಾಂಡಿಮಲ್ ಗರಿಷ್ಠ ಸ್ಕೋರ್(79) ದಾಖಲಿಸಿದರು. ಆರಂಭಿಕ ಆಟಗಾರ ಕುಶಾಲ್ ಪೆರೇರ(57 ರನ್) ಹಾಗೂ ಚಾಮರ ಕಪುಗಡೇರ 71 ರನ್ ಗಳಿಸಿದರು.

ಸ್ಕಾಟ್ಲೆಂಡ್‌ನ ಪರ ಎವನ್ಸ್ ಹಾಗೂ ಸ್ಟುವರ್ಟ್ ವಿಟ್ಟಿಂಗ್‌ಹ್ಯಾಮ್ ತಲಾ 3 ವಿಕೆಟ್‌ಗಳನ್ನು ಕಬಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News