ಭಾರತದ ಬೌಲಿಂಗ್ ಕೋಚ್ ಹುದ್ದೆಗೆ ಝಹೀರ್ ಉತ್ತಮ ಆಯ್ಕೆ: ಹರ್ಭಜನ್

Update: 2017-05-23 18:10 GMT

ಹೊಸದಿಲ್ಲಿ, ಮೇ 23: ಭಾರತದ ಬೌಲಿಂಗ್ ಕೋಚ್ ಹುದ್ದೆಗೆ ಝಹೀರ್ ಖಾನ್ ಉತ್ತಮ ಆಯ್ಕೆಯಾಗಿದ್ದಾರೆ ಎಂದು ಹಿರಿಯ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿರುವ ಹರ್ಭಜನ್‌‘‘ ನನ್ನ ಅಭಿಪ್ರಾಯದ ಪ್ರಕಾರ ಭಾರತದ ವೇಗದ ಬೌಲಿಂಗ್ ಕೋಚ್ ಹುದ್ದೆಗೆ ಝಹೀರ್ ಖಾನ್ ಉತ್ತಮ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಉತ್ತಮ ಬೌಲಿಂಗ್‌ನ ಮೂಲಕ ಸಚಿನ್ ತೆಂಡುಲ್ಕರ್ ಹಾಗೂ ಎಂಎಸ್ ಧೋನಿಯ ಅಚ್ಚುಮೆಚ್ಚಿನ ಬೌಲರ್ ಆಗಿದ್ದ ಝಹೀರ್ ಖಾನ್ ಭಾರತದ ಕ್ರಿಕೆಟ್ ಕಂಡ ಉತ್ತಮ ಎಡಗೈ ಬೌಲರ್ ಆಗಿದ್ದಾರೆ.

ನಿವೃತ್ತಿಯ ಬಳಿಕವೂ ಭಾರತೀಯ ಕ್ರಿಕೆಟ್‌ನಲ್ಲಿ ಸೇವೆ ಸಲ್ಲಿಸುವ ಬಯಕೆ ವ್ಯಕ್ತಪಡಿಸಿದ್ದ ಝಹೀರ್ ಖಾನ್,‘‘ಭಾರತೀಯ ಕ್ರಿಕೆಟ್ ತಂಡದಲ್ಲಿ ಬೌಲಿಂಗ್ ಕೋಚ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಸದಾ ಸಿದ್ಧನಿದ್ದೇನೆ. ನಾನು ಈಗಾಗಲೇ ಹುಡುಗರಿಗೆ ಸಲಹೆ-ಸೂಚನೆ ನೀಡುತ್ತಿರುವೆ. ಕ್ರಿಕೆಟ್‌ನಲ್ಲಿ ಕೋಚ್‌ಗೆ ದೊಡ್ಡ ಜವಾಬ್ದಾರಿ ಇರುತ್ತದೆ. ಆಟಗಾರರ ಪ್ರದರ್ಶನದ ಮೇಲೆ ಎಲ್ಲವೂ ಅವಲಂಬಿಸಿರುತ್ತದೆ’’ ಎಂದಿದ್ದಾರೆ.

  92 ಟೆಸ್ಟ್ ಹಾಗೂ 200 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಝಹೀರ್ ಖಾನ್ ಕ್ರಮವಾಗಿ 311 ಹಾಗೂ 282 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News