ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಸಂಗಕ್ಕರ ಸಜ್ಜು

Update: 2017-05-23 18:21 GMT

ಕೊಲಂಬೊ,ಮೇ 23: ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಸೆಪ್ಟಂಬರ್ ಅಂತ್ಯದಲ್ಲಿ ಇಂಗ್ಲೆಂಡ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ.

 ಪ್ರಸ್ತುತ ಕೌಂಟಿ ಕ್ರಿಕೆಟ್‌ನಲ್ಲಿ ಸರ್ರೆ ತಂಡವನ್ನು ಪ್ರತಿನಿಧಿಸುತ್ತಿರುವ ಸಂಗಕ್ಕರ 2015ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. 134 ಟೆಸ್ಟ್‌ಗಳಲ್ಲಿ 57.40ರ ಸರಾಸರಿಯಲ್ಲಿ 12,400 ರನ್ ಗಳಿಸಿದ್ದ ಸಂಗಕ್ಕರ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಆಟಗಾರರ ಪಟ್ಟಿಯಲ್ಲಿ ಐದನೆ ಸ್ಥಾನ ಪಡೆದಿದ್ದಾರೆ.

‘‘ನಾನು ಇಂಗ್ಲೆಂಡ್‌ನಲ್ಲಿ ಕೊನೆಯ ಬಾರಿ ನಾಲ್ಕು ದಿನಗಳ ಪಂದ್ಯವನ್ನು ಆಡಲಿದ್ದೇನೆ. ನನಗೆ ಇನ್ನು ಕೆಲವೇ ತಿಂಗಳಲ್ಲಿ 40 ವರ್ಷ ಭರ್ತಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಕೊನೆಯ ಪಂದ್ಯವಾಡುವ ಸಮಯ ಬಂದಿದೆ. ಕ್ರಿಕೆಟಿಗರಾಗಲಿ ಅಥವಾ ಬೇರೆ ಯಾವುದೇ ಕ್ರೀಡಾಪಟುವಾಗಲಿ ಕೊನೆಯ ದಿನ ಎಂಬುದು ಇರುತ್ತದೆ. ಆಗ ನಾವು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇಷ್ಟೊಂದು ವರ್ಷ ಆಡಿದ್ದು ನನ್ನ ಭಾಗ್ಯ’’ ಎಂದು ಸೀಮಿತ ಓವರ್ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿರುವ, 2007 ಹಾಗೂ 2011ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್ ಫೈನಲ್‌ಗೆ ತಲುಪಲು ನೆರವಾಗಿದ್ದ ಸಂಗಕ್ಕರ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News