ಫ್ರೆಂಚ್ ಓಪನ್ ಕ್ವಾಲಿಫೈಯರ್: ಭಾಂಬ್ರಿ, ರಾಮನಾಥನ್‌ಗೆ ಸೋಲು

Update: 2017-05-23 18:20 GMT

 ಪ್ಯಾರಿಸ್, ಮೇ 23: ಭಾರತದ ಟೆನಿಸ್ ಆಟಗಾರರಾದ ಯೂಕಿ ಭಾಂಬ್ರಿ ಹಾಗೂ ರಾಮ್‌ಕುಮಾರ್ ರಾಮನಾಥನ್ ಫ್ರೆಂಚ್ ಓಪನ್ ಕ್ವಾಲಿಫೈಯರ್‌ನ ಪುರುಷರ ಸಿಂಗಲ್ಸ್‌ನಲ್ಲಿ ಸೋತಿದ್ದು, ಸ್ಪರ್ಧೆಯಿಂದ ಹೊರ ನಡೆದಿದ್ದಾರೆ.

 ಮೊದಲ ಸುತ್ತಿನ ಪಂದ್ಯದಲ್ಲಿ ದಿಲ್ಲಿಯ ಆಟಗಾರ ಭಾಂಬ್ರಿ ವಿಶ್ವದ 132ನೆ ಕ್ರಮಾಂಕದ ಆಟಗಾರ ಪೀಟರ್ ಪೊಲ್ಯಾನ್‌ಸ್ಕಿಗೆ ಪ್ರಬಲ ಹೋರಾಟ ನೀಡಿದರೂ ಅಂತಿಮವಾಗಿ 6-7, 6-7 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

 ಏಕಪಕ್ಷೀಯವಾಗಿ ಸಾಗಿದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ರಾಮ್‌ಕುಮಾರ್ ಅವರು ಅರ್ಜೆಂಟೀನದ ಗುಡೊ ಪೆಲ್ಲಾ ವಿರುದ್ಧ 2-6, 1-6 ಸೆಟ್‌ಗಳ ಅಂತರದಿಂದ ಶರಣಾದರು.

 ಭಾರತದ ಇಬ್ಬರು ಆಟಗಾರರು ಕ್ವಾಲಿಫೈಯರ್ ಸುತ್ತಿನಲ್ಲಿ ಮುಗ್ಗರಿಸಿರುವ ಹಿನ್ನೆಲೆಯಲ್ಲಿ ವರ್ಷದ ಎರಡನೆ ಗ್ರಾನ್‌ಸ್ಲಾಮ್ ಟೂರ್ನಿ ಫ್ರೆಂಚ್ ಓಪನ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಯಾವೊಬ್ಬ ಆಟಗಾರನೂ ಸ್ಪರ್ಧಿಸುತ್ತಿಲ್ಲ. ಫ್ರೆಂಚ್ ಓಪನ್ ಮೇ 28 ರಿಂದ ಆರಂಭವಾಗಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News