ಮೆಸ್ಸಿಗೆ 21 ತಿಂಗಳು ಜೈಲು: 14.5 ಕೋಟಿ ರೂ. ದಂಡ

Update: 2017-05-24 13:26 GMT

ಸ್ಪೇನ್, ಮೇ 24: ತೆರಿಗೆ ವಂಚನೆ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಯವರಿಗೆ ಸ್ಪೇನ್ ನ ಸುಪ್ರೀಂ ಕೋರ್ಟ್ 21 ತಿಂಗಳುಗಳ ಕಾಲ ಜೈಲು ಹಾಗೂ 14,55,86,250 ಕೋಟಿ ರೂ. ದಂಡವನ್ನು ಖಚಿತಪಡಿಸಿದೆ.

ಮೆಸ್ಸಿಯವರ 4.16 ಮಿಲಿಯನ್ ಆದಾಯಕ್ಕೆ ತೆರಿಗೆ ತಪ್ಪಿಸುವ ಸಲುವಾಗಿ ಬೆಲೈಝ್, ಬ್ರಿಟನ್, ಸ್ವಿಝರ್ ಲ್ಯಾಂಡ್, ಹಾಗೂ ಉರುಗ್ವೆಯ ಕಂಪೆನಿಗಳನ್ನು ಬಳಸಿರುವುದರ ಬಗ್ಗೆ ಕೆಟಲಾನ್ ಕೋರ್ಟ್ ನಲ್ಲಿ ಮೆಸ್ಸಿ ಹಾಗೂ ಅವರ ತಂದೆ ಜಾರ್ಜ್ ಹೊರಾಶಿಯೋ ಮೆಸ್ಸಿ ತಪ್ಪೊಪ್ಪಿಕೊಂಡಿದ್ದರು. ಈ ಸಂದರ್ಭ ಕೋರ್ಟ್ 21 ತಿಂಗಳುಗಳ ಕಾಲ ಇಬ್ಬರಿಗೂ ದಂಡ ವಿಧಿಸಿತ್ತು. ಈ ಬಗ್ಗೆ ಅವರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೆಸ್ಸಿಗೆ 21 ತಿಂಗಳು ಹಾಗೂ ಅವರ ತಂದೆಗೆ 15 ತಿಂಗಳು ಜೈಲುಶಿಕ್ಷೆಯನ್ನು ದೃಢಪಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News