×
Ad

ಸುದಿರ್‌ಮನ್ ಕಪ್: ಭಾರತಕ್ಕೆ ನಾಕೌಟ್‌ಗೆ

Update: 2017-05-24 23:19 IST

ಗೋಲ್ಡ್‌ಕೋಸ್ಟ್(ಆಸ್ಟ್ರೇಲಿಯ), ಮೇ 24: ಸುದಿರ್‌ಮನ್ ಕಪ್ ಮಿಕ್ಸೆಡ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡ ನಾಕೌಟ್ ಹಂತಕ್ಕೇರಿದೆ. ಮುಂದಿನ ಸುತ್ತಿನಲ್ಲಿ 10 ಬಾರಿಯ ಚಾಂಪಿಯನ್ ಚೀನಾ ತಂಡವನ್ನು ಎದುರಿಸಲಿದೆ.

 ಗ್ರೂಪ್1 ಡಿಯ ಕೊನೆಯ ಪಂದ್ಯದಲ್ಲಿ ಇಂಡೋನೇಷ್ಯ ತಂಡ ಡೆನ್ಮಾರ್ಕ್ ತಂಡವನ್ನು 3-2 ರಿಂದ ಸೋಲಿಸಿದ ಹೊರತಾಗಿಯೂ ಭಾರತ ತಂಡ ಗೋಲು ಸರಾಸರಿಯ ಆಧಾರದಲ್ಲಿ ಮುಂದಿನ ಸುತ್ತಿಗೆ ತೇರ್ಗಡೆಯಾಯಿತು.

 2011ರ ಆವೃತ್ತಿಯಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದ ಭಾರತ ಇದೀಗ ಎರಡನೆ ಬಾರಿ ನಾಕೌಟ್ ಹಂತಕ್ಕೇರಲು ಸಮರ್ಥವಾಗಿದೆ. ಭಾರತ ಕಳೆದ 2 ಆವೃತ್ತಿಯ ಟೂರ್ನಿಯಲ್ಲಿ ಗ್ರೂಪ್ ಹಂತ ದಾಟಲು ವಿಫಲವಾಗಿತ್ತು.

ಮಂಗಳವಾರ ಇಂಡೋನೇಷ್ಯವನ್ನು 4-1 ರಿಂದ ಮಣಿಸಿದ್ದ ಭಾರತ ನಾಕೌಟ್ ಹಂತಕ್ಕೇರುವ ವಿಶ್ವಾಸ ಮೂಡಿಸಿತ್ತು. ಡಿ ಗುಂಪಿನಲ್ಲಿ ಎಲ್ಲ 3 ತಂಡಗಳಾದ ಭಾರತ,ಡೆನ್ಮಾರ್ಕ್, ಇಂಡೋನೇಷ್ಯ ತಲಾ ಒಂದು ಪಂದ್ಯಗಳನ್ನು ಜಯಿಸಿದ್ದವು. ಮ್ಯಾಚ್ ಸ್ಕೋರ್ ಆಧಾರದಲ್ಲಿ ಇಂಡೋನೇಷ್ಯವನ್ನು(4-6)ವನ್ನು ಹಿಂದಿಕ್ಕಿ ಮುಂದಿನ ಸುತ್ತಿಗೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News