ಒಂದೂ ಪಂದ್ಯ ಸೋಲದೇ ಟ್ರೋಫಿ ಗೆಲ್ಲುತ್ತೇವೆ: ಕೊಹ್ಲಿ
Update: 2017-05-24 23:42 IST
ಹೊಸದಿಲ್ಲಿ, ಮೇ 24: ‘‘ದೇಶಕ್ಕಾಗಿ ಸತತ ಪಂದ್ಯಗಳನ್ನು ಗೆಲ್ಲುವ ಉದ್ದೇಶದೊಂದಿಗೆ ನಾವು ಆಡುತ್ತೇವೆ. ಒಂದೂ ಪಂದ್ಯವನ್ನು ಸೋಲದೆಯೇ ಟ್ರೋಫಿಯನ್ನು ಉಳಿಸಿಕೊಳ್ಳುವ ಬಯಕೆ ಹೊಂದಿದ್ದೇವೆ’’ ಎಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ತೆರಳಲಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಯಾವಾಗಲೂ ಕುತೂಹಲಕಾರಿಯಾಗಿರುತ್ತದೆ. ಆದರೆ, ನಮಗೆ ಅದೊಂದು ಕ್ರಿಕೆಟ್ ಮಾತ್ರವಾಗಿದೆ. ಭಾರತ ಹಾಗೂ ಪಾಕ್ ನಡುವಿನ ಪಂದ್ಯದ ಬಗೆಗಿನ ಪ್ರಚಾರ ನಮ್ಮ ಹಿಡಿತದಲ್ಲಿಲ್ಲ. ಧೋನಿ ಹಾಗೂ ಯುವರಾಜ್ ಸಿಂಗ್ ಅವರ ಉಪಸ್ಥಿತಿಯು ತಂಡಕ್ಕೆ ನೆರವಾಗಲಿದೆ’’ ಎಂದು ಕೊಹ್ಲಿ ತಿಳಿಸಿದ್ದಾರೆ.
ಭಾರತ ತಂಡ ಟೂರ್ನಮೆಂಟ್ ಆರಂಭಕ್ಕೆ ಮೊದಲು ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.