ಟ್ವಿಟರ್ ನಲ್ಲಿ ಸೆಹ್ವಾಗ್ ಕೋಟ್ಯಧಿಪತಿ

Update: 2017-05-24 18:14 GMT

ಹೊಸದಿಲ್ಲಿ, ಮೇ 24: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಎದುರಾಳಿ ಬೌಲರ್‌ಗಳನ್ನು ಬೆಂಡೆತ್ತಲು ಹೆಸರುವಾಸಿಯಾಗಿದ್ದ ವೀರೇಂದ್ರ ಸೆಹ್ವಾಗ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಹಾಗೂ ಇತರ ವಿಷಯಗಳ ಮೂಲಕ ಸದಾ ಸಕ್ರಿಯರಾಗಿದ್ದಾರೆ. ಟ್ವಿಟರ್ ನಲ್ಲಿ ಸೆಹ್ವಾಗ್‌ಗೆ ಸುಮಾರು 1 ಕೋಟಿ ಫಾಲೋವರ್ಸ್‌ಗಳಿದ್ದಾರೆ.

ಟ್ವಿಟರ್ ನಲ್ಲಿ ತನ್ನನ್ನು ಹಿಂಬಾಲಿಸುತ್ತಿರುವ ಎಲ್ಲರಿಗೂ ಸೆಹ್ವಾಗ್ ಕೃತಜ್ಞತೆ ಸಲ್ಲಿಸಿದ್ದಾರೆ.

‘‘ನನ್ನನ್ನು ಟ್ವಿಟರ್ ಕೋಟ್ಯಧಿಪತಿಯನ್ನಾಗಿ ಮಾಡಿರುವ ಎಲ್ಲರಿಗೂ ಕೃತಜ್ಞತೆಗಳು ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಸೆಹ್ವಾಗ್ ತನ್ನ ಮಾಜಿ ಸಹ ಆಟಗಾರರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ, ವಿವಿಎಸ್ ಲಕ್ಷ್ಮಣ್, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರ ವೈಯಕ್ತಿಕ ವಿಷಯಗಳ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸುತ್ತಿರುತ್ತಾರೆ. ಕೆಲವೊಮ್ಮೆ ರಾಜಕೀಯ ಹಾಗೂ ಸಾಮಾಜಿಕ ವಿಷಯಗಳ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News