ಬಿಡಬ್ಲುಎಫ್ ಅಥ್ಲೆಟಿಕ್ಸ್ ಕಮಿಶನ್ ಸದಸ್ಯೆಯಾಗಿ ಸಿಂಧು ಆಯ್ಕೆ

Update: 2017-05-24 18:19 GMT

ಗೋಲ್ಡ್‌ಕಾಸ್ಟ್(ಆಸ್ಟ್ರೇಲಿಯ), ಮೇ 24: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಬಿಡಬ್ಲುಎಫ್ ಅಥ್ಲೆಟಿಕ್ಸ್ ಕಮಿಶನ್‌ನ ಓರ್ವ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ಇಲ್ಲಿ ನಡೆದ ಪ್ರತಿನಿಧಿ ಮಂಡಳಿಯ ನಾಲ್ಕು ಸ್ಥಾನಕ್ಕಾಗಿ ನಡೆದೆ ಚುನಾವಣೆಯಲ್ಲಿ ಭಾರತದ ಸಿಂಧು 129 ಮತ ಪಡೆದರು.

‘‘ಬಿಡಬ್ಲುಎಫ್ ಅಥ್ಲೆಟಿಕ್ಸ್ ಕಮಿಶನ್‌ ಸದಸ್ಯೆಯಾಗಿ ಆಯ್ಕೆಯಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನನ್ನು ಆಯ್ಕೆ ಮಾಡಿರುವ ಆಟಗಾರರಿಗೆ ಕೃತಜ್ಞತೆ ಸಲ್ಲಿಸುವೆ. ಇದೊಂದು ದೊಡ್ಡ ಜವಾಬ್ದಾರಿಯಾಗಿದ್ದು, ನನ್ನ ಹೊಸ ಹುದ್ದೆಗೆ ನ್ಯಾಯ ಒದಗಿಸುವೆ’’ ಎಂದು ಸಿಂಧು ಪ್ತತಿಕ್ರಿಯಿಸಿದರು.

ಸಿಂಧು ಅವರಲ್ಲದೆ ಜರ್ಮನಿಯ ಮಾರ್ಕ್ ಝ್ವ್ವೆಬ್ಲೆರ್(108 ಮತ) ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮೊರ್ 103 ಅಂಕ ಪಡೆದು 3ನೆ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News