ಜ್ವಾಲಾ ಗುಟ್ಟಾ ಭಾರತೀಯ ಬ್ಯಾಡ್ಮಿಂಟನ್ ತಂಡದ ಕೋಚ್?

Update: 2017-05-25 11:11 GMT

ಹೈದರಾಬಾದ್, ಮೇ 25: ಭಾರತದ ಶ್ರೇಷ್ಠ ಡಬಲ್ಸ್ ಶಟ್ಲರ್ ಜ್ವಾಲಾ ಗುಟ್ಟಾ ಅವರ ವೃತ್ತಿ ಜೀವನ ಕೊನೆಯ ಹಂತ ತಲುಪಿದೆಯೇ?

ಮುಂದಿನ ತಿಂಗಳು ನಡೆಯಲಿರುವ ಆಸ್ಟ್ರೇಲಿಯ ಓಪನ್ ಸೂಪರ್ ಸರಣಿಯಲ್ಲಿ ಭಾಗವಹಿಸಲಿರುವ ಭಾರತೀಯ ಬ್ಯಾಡ್ಮಿಂಟನ್ ತಂಡದ ಕೋಚ್‌ಗಳ ಪೈಕಿ ಓರ್ವರಾಗಿ ಆಯ್ಕೆಯಾಗಿರುವ ಜ್ವಾಲಾ ಗುಟ್ಟಾ ಇಂತಹ ಪ್ರಶ್ನೆ ಹುಟ್ಟಲು ಕಾರಣವಾಗಿದ್ದಾರೆ.

ಜ್ವಾಲಾ ಗುಟ್ಟಾ ತನ್ನ ಭವಿಷ್ಯದ ಯೋಜನೆಯ ಗುಟ್ಟನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಎರಡು ಡಬಲ್ಸ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಏಕೈಕ ಸ್ಪರ್ಧಿಯಾಗಿದ್ದ ಜ್ವಾಲಾ ಟೀಮ್ ಸ್ಪರ್ಧೆಗಳಲ್ಲಿ ಬಹಳಷ್ಟು ಕೊಡುಗೆ ನೀಡಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಜೊತೆಗೂಡಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಹಾಗೂ 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು.

ಕಳೆದ 18 ವರ್ಷಗಳಿಂದ ಬ್ಯಾಡ್ಮಿಂಟನ್ ಆಡುತ್ತಿರುವ ಜ್ವಾಲಾ ಮಾರ್ಚ್‌ನಲ್ಲಿ ಫ್ರಾಂಚೈಸಿ ಇಂಡಿಯಾದ ಜೊತೆಗೂಡಿ ಗ್ಲೋಬಲ್ ಅಕಾಡೆಮಿ ಫಾರ್ ಬ್ಯಾಡ್ಮಿಂಟನ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

ತಾನು ಆಟಗಾರ್ತಿಯಾಗಿ ಮುಂದುವರಿಯುವೆ ಎಂದು ಗುಟ್ಟಾ ಹೇಳಿದ್ದಾರೆ. ಆದರೆ, ಭಾರತ ತಂಡದೊಂದಿಗೆ ಕೋಚ್ ಆಗಿ ವಿದೇಶಕ್ಕೆ ತೆರಳಿದ ಬಳಿಕ ಅವರು ಆಟಗಾರ್ತಿಯಾಗಿ ಮುಂದುವರಿಯುವುದು ಅನುಮಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News