ರೊನಾಲ್ಡೊರಿಂದ 9 ಮಿಲಿಯನ್ ಡಾಲರ್ ತೆರಿಗೆ ವಂಚನೆ?

Update: 2017-05-25 17:26 GMT

 ಮ್ಯಾಡ್ರಿಡ್, ಮೇ 25: 2011 ಹಾಗೂ 2013ರ ನಡುವೆ ತನ್ನ ಇಮೇಜ್ ರೈಟ್ಸ್‌ನ್ನು ಸರಿಯಾಗಿ ಘೋಷಿಸದ ರಿಯಲ್ ಮ್ಯಾಡ್ರಿಡ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ 8 ಮಿಲಿಯನ್ ಯುರೋಸ್‌ಗೂ ಅಧಿಕ(8.95 ಮಿಲಿಯನ್ ಡಾಲರ್) ತೆರಿಗೆ ವಂಚಿಸಿರುವುದಾಗಿ ಸ್ಪೇನ್‌ನ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸ್ಪೇನ್‌ನ ಮಾಧ್ಯಮಗಳು ವರದಿ ಮಾಡಿವೆ.

ಸ್ಪೇನ್‌ನ ತೆರಿಗೆ ಪ್ರಾಧಿಕಾರದ ಮೂಲಗಳನ್ನು ಆಧರಿಸಿ ರೇಡಿಯೋ ಸ್ಟೇಶನ್‌ಗಳಾಧ ಕಡೆನಾ ಸೆರ್ ಹಾಗೂ ಕಡೆನಾ ಕೋಪ್ ಗುರುವಾರ ಬಹಿರಂಗಪಡಿಸಿವೆ.

 ರೊನಾಲ್ಡೊ ಕ್ರಿಮಿನಲ್ ಅಪರಾಧ ಮಾಡಿದ್ದಾರೆಯೋ ಅಥವಾ ಆಡಳಿತಾತ್ಮಕ ದೋಷ ಎಸೆಗಿದ್ದಾರೆಯೋ ಎಂಬ ಬಗ್ಗೆ ತೆರಿಗೆ ಪ್ರಾಧಿಕಾರದೊಳಗೆ ಚರ್ಚೆ ಆರಂಭವಾಗಿದೆ. ತನಿಖೆ ಆರಂಭವಾಗುವ ಮೊದಲು ರೊನಾಲ್ಡೊ ಪರಿಸ್ಥಿತಿಯನ್ನು ಸರಿಪಡಿಸಬಹುದು ಎಂದು ರೇಡಿಯೋ ಸ್ಟೇಶನ್‌ಗಳು ವರದಿ ಮಾಡಿವೆ.

 ಒಂದು ವೇಳೆ ರೊನಾಲ್ಡೊ ಆಡಳಿತಾತ್ಮಕ ತಪ್ಪೆಸಗಿದ್ದರೆ ದಂಡ ಸಹಿತ 8 ಮಿಲಿಯನ್ ಯುರೋಸ್‌ನ್ನು ಮರುಪಾವತಿಸಬೇಕಾಗುತ್ತದೆ. ರೊನಾಲ್ಡೊ ಕ್ರಿಮಿನಲ್ ಅಪರಾಧ ಎಸೆಗಿದ್ದು ಸಾಬೀತಾದರೆ 2011, 2012, 2013ರಲ್ಲಿ ಎಸಗಿದ್ದ ಅಪರಾಧದ ಆಧಾರದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

 ಸ್ಪೇನ್‌ನ ಸುಪ್ರೀಂಕೋರ್ಟ್ ಬಾರ್ಸಿಲೋನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ 4.5 ಮಿಲಿಯನ್ ಯುರೋಸ್ ತೆರಿಗೆ ವಂಚಿಸಿದ ಆರೋಪದಲ್ಲಿ 21 ತಿಂಗಳ ಜೈಲು ಶಿಕ್ಷೆಯನ್ನು ಖಾಯಂಗೊಳಿಸಿದ 24 ಗಂಟೆಯೊಳಗೆ ರೊನಾಲ್ಡೊರ ತೆರಿಗೆ ವಂಚನೆ ಪ್ರಕರಣ ಬಹಿರಂಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News