ಇಂಗ್ಲೆಂಡ್ ತಲುಪಿದ ಟೀಮ್ ಇಂಡಿಯಾ

Update: 2017-05-25 17:40 GMT

ಲಂಡನ್, ಮೇ 25: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಉದ್ದೇಶದೊಂದಿಗೆ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಕ್ರಿಕೆಟ್ ತಂಡ ಗುರುವಾರ ಇಂಗ್ಲೆಂಡ್‌ಗೆ ತಲುಪಿದೆ. ಕೊಹ್ಲಿ ಪಡೆ ಜೂ.4 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

ಟೂರ್ನಿಯು ಆರಂಭವಾಗುವ ಮೊದಲು ಭಾರತ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಮೇ 28 ರಂದು ನ್ಯೂಝಿಲೆಂಡ್ ಹಾಗೂ ಮೇ 30 ರಂದು ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ.

ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಯುವರಾಜ್ ಸಿಂಗ್, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್,ಕೇದಾರ್ ಜಾಧವ್, ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್, ಜಸ್‌ಪ್ರಿತ್ ಬುಮ್ರಾ, ಉಮೇಶ್ ಯಾದವ್, ಮುಹಮ್ಮದ್ ಶಮಿ.

ಟೀಮ್ ಇಂಡಿಯಾದ ವೇಳಾಪಟ್ಟಿ(ಲೀಗ್) ‘ಬಿ’ ಗುಂಪು:

ಜೂ.4: ಭಾರತ-ಪಾಕಿಸ್ತಾನ, ಎಡ್ಜ್‌ಬಾಸ್ಟನ್, ಬರ್ಮಿಂಗ್‌ಹ್ಯಾಮ್, ಸಮಯ: ಮಧ್ಯಾಹ್ನ 3:00(ಭಾರತೀಯ ಕಾಲಮಾನ)

ಜೂ.8: ಭಾರತ-ಶ್ರೀಲಂಕಾ, ಕೆನ್ನಿಂಗ್ಟನ್ ಓವಲ್, ಲಂಡನ್, ಸಮಯ: ಮಧ್ಯಾಹ್ನ 3:00.

ಜೂ.11: ಭಾರತ-ದಕ್ಷಿಣ ಆಫ್ರಿಕ, ಕೆನ್ನಿಂಗ್ಟನ್ ಓವಲ್, ಲಂಡನ್, ಸಮಯ: ಮಧ್ಯಾಹ್ನ 3:00.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News