ಮುಂಬೈ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್ ಅಗರ್‌ಕರ್

Update: 2017-05-26 18:02 GMT

ಮುಂಬೈ, ಮೇ 26: ಮುಂಬೈನ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 17 ವರ್ಷಗಳ ಕಾಲ ಆಡಿರುವ, ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್‌ಕರ್ ಶುಕ್ರವಾರ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ) ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಗರ್‌ಕರ್ ಹಿರಿಯರ ಹಾಗೂ ಅಂಡರ್-23 ತಂಡಗಳ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅಗರ್‌ಕರ್ ಅಲ್ಲದೆ ನೀಲೇಶ್ ಕುಲಕರ್ಣಿ, ಜತಿನ್ ಪರಾಂಜಪೆ ಹಾಗೂ ಸುನೀಲ್ ಮೋರೆ ಹಿರಿಯರ ಆಯ್ಕೆ ಸಮಿತಿಯಲ್ಲಿದ್ದಾರೆ.

ಅಂಡರ್-19 ಆಯ್ಕೆ ಸಮಿತಿಗೆ ರಾಜೇಶ್ ಪವಾರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವಿಷ್ಕಾರ್ ಸಾಳ್ವೆ, ರಾಜು ಸುತರ್ ಹಾಗೂ ಸಂತೋಷ್ ಶಿಂಧೆ ಸಮಿತಿಯ ಇತರ ಸದಸ್ಯರಾಗಿದ್ದಾರೆ.

 ಅಗರ್‌ಕರ್ 1998ರಲ್ಲಿ ಕೊಚ್ಚಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಚೊಚ್ಚಲ ಏಕದಿನ ಪಂದ್ಯ ಆಡಿದ್ದರು. ಅದೇ ವರ್ಷ ಹರಾರೆಯಲ್ಲಿ ಝಿಂಬಾಬ್ವೆ ವಿರುದ್ಧ ಮೊದಲ ಟೆಸ್ಟ್‌ನ್ನು ಆಡಿದ್ದರು. ಅಗರ್‌ಕರ್ 191 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿದ್ದು, 288 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 28 ಟೆಸ್ಟ್‌ಗಳಲ್ಲಿ 58 ವಿಕೆಟ್‌ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News