ರಾಹುಲ್ ದ್ರಾವಿಡ್ ಭಾರತದ ಕೋಚ್ ಆಗಲಿ: ಪಾಂಟಿಂಗ್

Update: 2017-05-26 18:11 GMT

 ಹೊಸದಿಲ್ಲಿ, ಮೇ 26: ರಾಹುಲ್ ದ್ರಾವಿಡ್‌ರನ್ನು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಬೇಕೆಂದು ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಅನಿಲ್ ಕುಂಬ್ಳೆ ಪ್ರಸ್ತುತ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಒಂದು ವರ್ಷದ ಅವಧಿಯು ಜೂ.20ಕ್ಕೆ ಕೊನೆಗೊಳ್ಳಲಿದೆ. ಭಾರತ ಜೂ.23 ರಿಂದ ಏಕದಿನ ಸರಣಿ ಹಾಗೂ ಟ್ವೆಂಟಿ-20 ಪಂದ್ಯವನ್ನಾಡಲು ವೆಸ್ಟ್‌ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದೆ. ವಿಂಡೀಸ್‌ಗೆ ಭಾರತ ತಂಡದೊಂದಿಗೆ ಕೋಚ್ ಆಗಿ ಯಾರು ತೆರಳಲಿದ್ದಾರೆಂದು ಇನ್ನೂ ಸ್ಪಷ್ಟವಾಗಿಲ್ಲ. ಬಿಸಿಸಿಐ ಹೊಸ ಕೋಚ್‌ಗೆ ಅರ್ಜಿಗಳನ್ನು ಆಹ್ವಾನಿಸಿದೆ.

  ‘‘ದ್ರಾವಿಡ್‌ರನ್ನು ಕೋಚ್ ಆಗಿ ನೇಮಿಸುವುದು ನನ್ನ ನಿರ್ಧಾರವಲ್ಲ. ಭಾರತದ ಕೋಚ್ ವಿದೇಶದವರೆ, ಸ್ವದೇಶದವರೇ ಎಂದು ಬಿಸಿಸಿಐ ನಿರ್ಧರಿಸಲಿದೆ. ಬಿಸಿಸಿಐಗೆ ದ್ರಾವಿಡ್‌ರಂತಹ ಉತ್ತಮ ಕೋಚ್ ಸಿಗಲಾರರು. ಅವರಲ್ಲಿ ಬಹಳಷ್ಟು ಜ್ಞಾನ, ಅನುಭವವಿದೆ. ಐಪಿಎಲ್‌ನಲ್ಲೂ ಕೋಚ್ ಆಗಿರುವ ಕಾರಣ ಎಲ್ಲ 3 ಪ್ರಕಾರದ ಕ್ರಿಕೆಟ್ ಕುರಿತು ಅವರಿಗೆ ಗೊತ್ತಿದೆ’’ ಎಂದು ಪಾಂಟಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News