ಐಎಸ್‌ಎಲ್ ಸೇರ್ಪಡೆಗೆ ಬೆಂಗಳೂರು ಎಫ್‌ಸಿ ಅರ್ಜಿ ಸಲ್ಲಿಕೆ

Update: 2017-05-26 18:12 GMT

ಮುಂಬೈ, ಮೇ 26: ಇಂಡಿಯನ್ ಸೂಪರ್ ಲೀಗ್‌ಗೆ(ಐಎಸ್‌ಎಲ್) ಹೊಸ ತಂಡಗಳ ಸೇರ್ಪಡೆಗೆ ಬಿಡ್ ಆಹ್ವಾನಿಸಲಾಗಿದ್ದು, ಬೆಂಗಳೂರು ಎಫ್‌ಸಿ ತಂಡ ಬಿಡ್ ಪೇಪರ್‌ಗಳನ್ನು ಸಲ್ಲಿಸಿದ ಐ-ಲೀಗ್‌ನ ಮೊದಲ ತಂಡ ಎನಿಸಿಕೊಂಡಿದೆ.

ಐಎಸ್‌ಎಲ್ ಸೇರ್ಪಡೆಗೆ ಬಿಡ್ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ಭಾರತ ಎರಡು ಪ್ರಮುಖ ಫುಟ್ಬಾಲ್ ಕ್ಲಬ್‌ಗಳಾದ ಮೋಹನ್ ಬಗಾನ್ ಹಾಗೂ ಈಸ್ಟ್ ಬಂಗಾಳ ಐಎಸ್‌ಎಲ್‌ಗೆ ಸೇರದಿರಲು ನಿರ್ಧರಿಸಿವೆ.

ಬೆಂಗಳೂರು ಎಫ್‌ಸಿ ಅಧಿಕಾರಿ ಮುಸ್ತಫಾ ಗೌಸ್ ಬೆಂಗಳೂರು ಎಫ್‌ಸಿ ಬಿಡ್ ಪೇಪರ್‌ಗಳನ್ನು ಸಲ್ಲಿಸಿದ್ದನ್ನು ದೃಢಪಡಿಸಿದ್ದಾರೆ.

2017-18ರ ನಾಲ್ಕನೆ ಆವೃತಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮೂರು ಹೊಸ ತಂಡಗಳು ಸೇರ್ಪಡೆಯಾಗಲಿವೆ. 2014ರಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ನಿಂದ ಆರಂಭಿಸಲ್ಪಟ್ಟಿರುವ ಐಎಸ್‌ಎಲ್ ಮುಂಬರುವ ಋತುವಿನಲ್ಲಿ ಭಾರತದ ಪ್ರಮುಖ ಟೂರ್ನಿ ಎನಿಸಿಕೊಳ್ಳಲಿದೆ.

 10 ನಗರಗಳಾದ ಅಹ್ಮದಾಬಾದ್, ಬೆಂಗಳೂರು, ಕಟಕ್, ದುರ್ಗಾಪುರ್, ಹೈದರಾಬಾದ್, ಜೆಮ್ಶೆಡ್‌ಪುರ, ಕೋಲ್ಕತಾ, ರಾಂಚಿ, ಸಿಲಿಗುರಿ ಹಾಗೂ ತಿರುವನಂತಪುರಂ ತಂಡದ ಮಾಲಕರು ಬಿಡ್‌ಗಳನ್ನು ಆಹ್ವಾನಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News