ವಿಶ್ವ ಟಿಟಿ ಚಾಂಪಿಯನ್‌ಶಿಪ್: ಭಾರತಕ್ಕೆ ಶರತ್ ಕಮಲ್ ಸಾರಥ್ಯ

Update: 2017-05-26 18:16 GMT

 ಹೊಸದಿಲ್ಲಿ, ಮೇ 26: ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಶರತ್ ಕಮಲ್ ಮತ್ತೊಮ್ಮೆ ಭಾರತದ ನಾಯಕತ್ವವಹಿಸಿಕೊಳ್ಳಲಿದ್ದಾರೆ. ಟಿಟಿ ಚಾಂಪಿಯನ್‌ಶಿಪ್ ಮೇ 29 ರಿಂದ ಜೂ.5ರ ತನಕ ನಡೆಯಲಿದೆ.

8 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 53ನೆ ರ್ಯಾಂಕಿನ ಕಮಲ್ ಅವರಲ್ಲದೆ ಸೌಮ್ಯಜಿತ್ ಘೋಷ್(83ನೆ ರ್ಯಾಂಕ್), ಜಿ. ಸತ್ಯನ್ ಹಾಗೂ ಹರ್ಮಿತ್ ದೇಸಾಯಿ(95)ಭಾಗವಹಿಸಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಹಾಲಿ ನ್ಯಾಶನಲ್ ಚಾಂಪಿಯನ್ ಮಧುರಿಕಾ ಪಾಟ್ಕರ್, ಮನಿಕಾ ಬಾತ್ರಾ(103),ವೌಮಾ ದಾಸ್ ಹಾಗೂ ಅಹಿಕಾ ಮುಖರ್ಜಿ ಪಾಲ್ಗೊಳ್ಳಲಿದ್ದಾರೆ.

ತಲಾ ನಾಲ್ವರು ಪುರುಷರು ಹಾಗೂ ಮಹಿಳೆಯರನ್ನು ಒಳಗೊಂಡ 8 ಸದಸ್ಯರ ತಂಡದ ನಾಯಕತ್ವವನ್ನು ವಹಿಸಿರುವ ಅಗ್ರ ರ್ಯಾಂಕಿನ ಕಮಲ್ ತನ್ನದೇ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. 34ರ ಹರೆಯದ ಘೋಷ್ ಕೊನೆಯ ಬಾರಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಭಾರತ ಡಬಲ್ಸ್ ಪಂದ್ಯವಲ್ಲದೆ, ಮಿಶ್ರ ಡಬಲ್ಸ್ ಪಂದ್ಯವನ್ನೂ ಆಡಲಿದೆ. ಮನಿಕಾ ಬಾತ್ರ ಹಾಗೂ ಮಧುರಿಕಾ ಪಾಟ್ಕರ್ ಅವರು ಜಿ. ಸತ್ಯನ್ ಹಾಗೂ ಹರ್ಮಿತ್ ದೇಸಾಯಿಯೊಂದಿಗೆ ಮಿಶ್ರ ಡಬಲ್ಸ್ ಆಡಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಕಮಲ್ ಹಾಗೂ ಸತ್ಯನ್, ಘೋಷ್ ಹಾಗೂ ದೇಸಾಯಿ ಸ್ಪರ್ಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News