ಕೌಂಟಿ ಚಾಂಪಿಯನ್‌ಶಿಪ್: ಸಂಗಕ್ಕರ ಸತತ 5ನೆ ಶತಕ

Update: 2017-05-27 16:26 GMT

ಲಂಡನ್, ಮೇ 27: ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಅವರ ರನ್ ಹಸಿವು ಇನ್ನೂ ನೀಗಿಲ್ಲ. ಎಸ್ಸೆಕ್ಸ್ ವಿರುದ್ಧದ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ತಂಡ 31 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಶತಕ ಬಾರಿಸಿ ಸರ್ರೆ ತಂಡವನ್ನು ಆಧರಿಸಿದ್ದಾರೆ.

ಸಂಗಕ್ಕರ ಶತಕದ(ಅಜೇಯ 177) ನೆರವಿನಿಂದ ಸರ್ರೆ 7 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿದೆ. ಸಂಗಕ್ಕರ ಕೌಂಟಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸತತ 5ನೆ ಶತಕ ಬಾರಿಸಿದರು. ವಾರ್ವಿಕ್‌ಶೈರ್ ವಿರುದ್ಧ ಅಜೇಯ 105, ಹ್ಯಾಂಪ್‌ಶೈರ್ ವಿರುದ್ಧ 124, ಮಿಡ್ಲ್‌ಸೆಕ್ಸ್ ವಿರುದ್ಧ 114, 120 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News