​ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಜಯ

Update: 2017-05-28 18:09 GMT

  ಲಂಡನ್, ಮೇ 28: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನ ಅಭ್ಯಾಸ ಪಂದ್ಯದಲ್ಲಿ ಇಂದು ನ್ಯೂಝಿಲೆಂಡ್ ವಿರುದ್ಧ ಭಾರತ 45 ರನ್‌ಗಳ ಜಯ ಗಳಿಸಿದೆ. ಕೆನಿಂಗ್ಟನ್ ಓವಲ್‌ನಲ್ಲಿ ಗೆಲುವಿಗೆ 190 ರನ್‌ಗಳ ಸವಾಲನ್ನು ಪಡೆದ ಭಾರತ 26 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 129 ರನ್ ಗಳಿಸುವಷ್ಟರಲ್ಲಿ ಮಳೆ ಕಾಣಿಸಿಕೊಂಡು ಆಟ ಅರ್ಧಕ್ಕೆ ನಿಂತಿತು. ಬಳಿಕ ಆಟ ಆರಂಭಗೊಳ್ಳಲಿಲ್ಲ.
ಡಿಎಲ್ ನಿಯಮದಂತೆ ಭಾರತ 26 ಓವರ್‌ಗಳಲ್ಲಿ 86 ರನ್ ಗಳಿಸಬೇಕಿತ್ತು. ಆಟ ನಿಂತಾಗ 129 ರನ್ ಗಳಿಸಿರುವ ಹಿನ್ನೆಲೆಯಲ್ಲಿ ಭಾರತ 45 ರನ್‌ಗಳ ಜಯ ಗಳಿಸಿತು.
ಭಾರತದ ಪರ ಶಿಖರ್ ಧವನ್ ಜೊತೆ ಇನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ(7) ಬೇಗನೆ ಔಟಾಗಿದರು.
ಎರಡನೆ ವಿಕೆಟ್‌ಗೆ ಧವನ್ ಮತ್ತು ನಾಯಕ ವಿರಾಟ್ ಕೊಹ್ಲಿ 68 ರನ್‌ಗಳ ಜೊತೆಯಾಟ ನೀಡಿದರು. ಧವನ್ 40 ರನ್ ಗಳಿಸಿದರು.
 ದಿನೇಶ್ ಕಾರ್ತಿಕ್(0) ಖಾತೆ ತೆರೆಯದೆ ನಿರ್ಗಮಿಸಿದರು.. ಆಟ ನಿಂತಾಗ ನಾಯಕ ಕೊಹ್ಲಿ ಔಟಾಗದೆ 52 ರನ್ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಔಟಾಗದೆ 17 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡು ನ್ಯೂಝಿಲೆಮಡ್ ತಂಡ ಭಾರತದ ಮುಹಮ್ಮದ್ ಶಮಿ(47ಕ್ಕೆ 3), ಭುವನೇಶ್ವರ ಕುಮಾರ್(28ಕ್ಕೆ 3) ಮತ್ತು ರವೀಂದ್ರ ಜಡೇಜ(8ಕ್ಕೆ 2) ದಾಳಿಗೆ ಸಿಲುಕಿ 38.4 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲೌಟಾಗಿತ್ತು.
ನ್ಯೂಝಿಲೆಂಡ್ ತಂಡದ ವಿಕೆಟ್ ಕೀಪರ್ ಲ್ಯೂಕ್ ರೊಂಚಿ 66 ರನ್, ಜೇಮ್ಸ್ ನಿಶಮ್ ಔಟಾಗದೆ 46ರನ್ ಗಳಿಸಿದರು. ಆ್ಯಂಡರ್ಸನ್ (13) ಮತ್ತು ಸ್ನಾಂಟ್ನರ್ (12) ಎರಡಂಕೆಯ ಕೊಡುಗೆ ನೀಡಿದರು.
ಸಂಕ್ಷಿಪ್ತ ಸ್ಕೋರ್ ವಿವರ
 ನ್ಯೂಝಿಲೆಂಡ್ 38.4 ಓವರ್‌ಗಳಲ್ಲಿ ಆಲೌಟ್ 189( ಲೂಂಚಿ 66,ಜೇಮ್ಸ್ ನಿಶಮ್ ಔಟಾಗದೆ 46; ಭುವನೇಶ್ವರ ಕುಮಾರ್28ಕ್ಕೆ 3, ಮುಹಮ್ಮದ್ ಶಮಿ 47ಕ್ಕೆ 3)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News