×
Ad

ಚಾಂಪಿಯನ್ಸ್ ಟ್ರೋಫಿ; ತಮೀಮ್ ಶತಕ;ಬಾಂಗ್ಲಾದೇಶ 305

Update: 2017-06-01 19:28 IST

ಲಂಡನ್, ಜೂ.1: ಆರಂಭಿಕ ದಾಂಡಿಗ ತಮೀಮ್ ಇಕ್ಬಾಲ್ ಶತಕ ಮತ್ತು ವಿಕೆಟ್‌ಕೀಪರ್ ಮುಸ್ತಫಿಕುರ್ರಹೀಮ್ ದಾಖಲಿಸಿದ ಅರ್ಧಶತಕದ ನೆರವಿನಲ್ಲಿ ಬಂಗ್ಲಾದೇಶ ತಂಡ ಇಲ್ಲಿ ಆರಂಭಗೊಂಡ ಇಂಗ್ಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 305 ರನ್ ಗಳಿಸಿದೆ.

 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ ತಂಡಕ್ಕೆ ಆರಂಭಿಕ ದಾಂಡಿಗರಾದ ಸೌಮ್ಯ ಸರ್ಕಾರ್ ಮತ್ತು ತಮೀಮ್ ಇಕ್ಬಾಲ್ ಮೊದಲ ವಿಕೆಟ್‌ಗೆ 12 ಓವರ್‌ಗಳಲ್ಲಿ 56 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಸೌಮ್ಯ ಸರ್ಕಾರ್ 28ರನ್, ಇಮ್ರುಲ್ ಕೈಸ್ 19 ರನ್ ಗಳಿಸಿ ಔಟಾದರು. ಮೂರನೆ ವಿಕೆಟ್‌ಗೆ ಇಕ್ಬಾಲ್ ಮತ್ತು ಮುಸ್ತಫಿಕುರ್ರಹೀಮ್166 ರನ್ ಸೇರಿಸಿದರು. ತಮೀಮ್ ಇಕ್ಬಾಲ್ 170ನೆ ಏಕದಿನ ಪಂದ್ಯದಲ್ಲಿ 9 ಶತಕ ದಾಖಲಿಸಿದರು.
ತಮೀಮ್ ಇಕ್ಬಾಲ್ 128 ರನ್ (142ಎ, 12ಬೌ,3ಸಿ) ಮತ್ತು ಮುಸ್ತಫಿಕುರ್ರಹೀಮ್ 79 ರನ್, ಶಾಕೀಬ್ ಅಲ್ ಹಸನ್ 10 ರನ್ ಮತ್ತು ಶಬೀರ್ ರಹ್ಮಾನ್ 24 ರನ್ ಗಳಿಸಿ ಔಟಾದರು.
 ಇಂಗ್ಲೆಂಡ್‌ನ ಪ್ಲೆಂಕೆಟ್ 59ಕ್ಕೆ 4 ವಿಕೆಟ್ ಪಡೆದರು.
,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News