×
Ad

ಭಾರತದ ಕೋಚ್ ಹುದ್ದೆಗೆ ಸೆಹ್ವಾಗ್ ಅರ್ಜಿ

Update: 2017-06-01 23:46 IST

ಹೊಸದಿಲ್ಲಿ, ಜೂ.1: ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಮಾಜಿ ಮ್ಯಾನೇಜರ್ ಲಾಲ್‌ಚಂದ್‌ರಾಜ್‌ಪೂತ್, ಮಾಜಿ ಬೌಲರ್ ದೊಡ್ಡ ಗಣೇಶ್, ಆಸ್ಟ್ರೇಲಿಯದ ಮಾಜಿ ಆಲ್‌ರೌಂಡರ್ ಟಾಮ್ ಮೂಡಿ ಹಾಗೂ ಇಂಗ್ಲೆಂಡ್‌ನ ರಿಚರ್ಡ್ ಪೈಬಸ್ ಭಾರತದ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ಹಾಲಿ ಕೋಚ್ ಆಗಿರುವ ಕುಂಬ್ಳೆಗೆ ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ನೇರ ಪ್ರವೇಶ ನೀಡಲಾಗಿದೆ.

 ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೊನೆಗೊಳ್ಳುವ ಹೊತ್ತಿಗೆ ಕುಂಬ್ಳೆ ಅವರ ಕೋಚ್ ಅವಧಿಯೂ ಮುಕ್ತಾಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಸಿಸಿಐ ಇತ್ತೀಚೆಗಷ್ಟೇ ಕೋಚ್ ಹುದ್ದೆಗೆ ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಅರ್ಜಿ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿತ್ತು. ಕುಂಬ್ಳೆ ಅವರು ಆಟಗಾರರ ಹಾಗೂ ತನ್ನ ಸಂಭಾವನೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಬೇಡಿಕೆ ಇಟ್ಟಿರುವ ಕಾರಣ ಅವರ ಬಗ್ಗೆ ಬಿಸಿಸಿಐ ಅಸಮಾಧಾನ ಹೊಂದಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News