×
Ad

ಫಿಫಾ ರ್ಯಾಂಕಿಂಗ್: 100ನೆ ಸ್ಥಾನ ಕಾಯ್ದುಕೊಂಡ ಭಾರತ

Update: 2017-06-01 23:57 IST

ಮುಂಬೈ, ಜೂ.1: ನೇಪಾಳ ವಿರುದ್ಧ ಜೂ.6 ರಂದು ನಡೆಯಲಿರುವ ಸೌಹಾರ್ದ ಫುಟ್ಬಾಲ್ ಪಂದ್ಯಕ್ಕೆ ಮೊದಲು ಭಾರತ ಫುಟ್ಬಾಲ್ ತಂಡ ಫಿಫಾ ರ್ಯಾಂಕಿಂಗ್‌ನಲ್ಲಿ 100ನೆ ಸ್ಥಾನವನ್ನು ಕಾಯ್ದುಕೊಂಡಿದೆ.

ಭಾರತ ತಂಡ ನೇಪಾಳ ವಿರುದ್ಧ ಪಂದ್ಯದ ಬಳಿಕ ಕಝಕಿಸ್ತಾನದ ವಿರುದ್ಧ 2019ರ ಎಎಫ್‌ಸಿ ಏಷ್ಯಾಕಪ್ ಕ್ವಾಲಿಫೈಯರ್ ಪಂದ್ಯವನ್ನು ಆಡಲಿದೆ.

ಕಳೆದ ತಿಂಗಳು ಯಾವುದೇ ಪಂದ್ಯವನ್ನಾಡದ ಭಾರತ 331 ಅಂಕ ಗಳಿಸಿದ್ದು, ನಿಕಾರಗ್ವಾ ಹಾಗೂ ಕಝಕಿಸ್ತಾನದೊಂದಿಗೆ 100ನೆ ಸ್ಥಾನ ಹಂಚಿಕೊಂಡಿದೆ.

ಭಾರತ ತಂಡ ಮೇನಲ್ಲಿ ಬಿಡುಗಡೆಯಾದ ಫಿಫಾ ರ್ಯಾಂಕಿಂಗ್‌ನಲ್ಲಿ 21 ವರ್ಷಗಳ ಬಳಿಕ ಅಗ್ರ-100ರಲ್ಲಿ ಸ್ಥಾನ ಪಡೆದಿತ್ತು. ಮೈನ್ಮಾರ್ ಹಾಗೂ ಕಾಂಬೊಡಿಯ ವಿರುದ್ಧ ಗೆಲುವು ಸಾಧಿಸಿದ ಬಳಿಕ ಭಾರತ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿತ್ತು. ಭಾರತ 1996ರಲ್ಲಿ ಕೊನೆಯ ಬಾರಿ ಫಿಫಾ ರ್ಯಾಂಕಿಂಗ್‌ನಲ್ಲಿ ಅಗ್ರ-100 ಸ್ಥಾನ ಪಡೆದಿತ್ತು.

ಕಾನ್ಫಡರೇಶನ್ ಕಪ್‌ಗೆ ಮೊದಲು ಬ್ರೆಝಿಲ್ ತಂಡ ಫಿಫಾ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಅರ್ಜೆಂಟೀನ ಹಾಗೂ ಜರ್ಮನಿ ತಂಡಗಳು ಕ್ರಮವಾಗಿ 2ನೆ ಹಾಗೂ 3ನೆ ಸ್ಥಾನ ಗಿಟ್ಟಿಸಿಕೊಂಡಿವೆ.

ಚಿಲಿ ಹಾಗೂ ಕೊಲಂಬಿಯಾ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದು, ಪೊಲೆಂಡ್ ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News