ವೋಕ್ಸ್ ಸ್ಥಾನಕ್ಕೆ ಫಿನ್ ಆಯ್ಕೆ
Update: 2017-06-04 22:55 IST
ಲಂಡನ್, ಜೂ.4: ಇಂಗ್ಲೆಂಡ್ ವೇಗದ ಬೌಲರ್ ಕ್ರಿಸ್ ವೋಕ್ಸ್ ಗಾಯಗೊಂಡು ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದ ಹಿನ್ನೆಲೆ ಯಲ್ಲಿ ವೋಕ್ಸ್ರಿಂದ ತೆರವಾದ ಸ್ಥಾನಕ್ಕೆ ಇನ್ನೋರ್ವ ವೇಗದ ಬೌಲರ್ ಸ್ಟೀವ್ ಫಿನ್ ಆಯ್ಕೆಯಾಗಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ರವಿವಾರ ತಿಳಿಸಿದೆ. ಬಾಂಗ್ಲಾದೇಶ ವಿರುದ್ಧ ಗುರುವಾರ ನಡೆದ ಟೂರ್ನಿಯ ಉದ್ಘಾಟನಾ ಪಂದ್ಯ ದಲ್ಲಿ ಕೇವಲ 2 ಓವರ್ ಬೌಲಿಂಗ್ ಮಾಡಿದ ಬಳಿಕ ವೋಕ್ಸ್ಗೆ ಗಾಯವಾಗಿದ್ದು, ಆಟವಾಡಲು ಸಾಧ್ಯವಾಗದೇ ಮೈದಾನ ವನ್ನು ತೊರೆದಿದ್ದರು. 69 ಏಕದಿನ ಪಂದ್ಯಗಳಲ್ಲಿ 102 ವಿಕೆಟ್ಗಳನ್ನು ಕಬಳಿಸಿರುವ ಫಿನ್ ಇಂಗ್ಲೆಂಡ್ ಬೌಲಿಂಗ್ ವಿಭಾಗವನ್ನು ಸೇರಿಕೊಳ್ಳಲಿದ್ದಾರೆ. ಇಂಗ್ಲೆಂಡ್ ಮಂಗಳವಾರ ತನ್ನ 2ನೆ ಪಂದ್ಯದಲ್ಲಿ ನ್ಯೂಝಿಲೆಂಡ್ ನ್ನು ಎದುರಿಸಲಿದೆ.