×
Ad

ಭಾರತದ ರನ್ ಹೊಳೆಯಲ್ಲಿ ಕೊಚ್ಚಿ ಹೋದ ಪಾಕ್

Update: 2017-06-04 23:40 IST

 ಬರ್ಮಿಂಗ್‌ಹ್ಯಾಮ್, ಜೂ.4: ಚಾಂಪಿಯನ್ಸ್‌ಟ್ರೋಫಿ ಟೂರ್ನಮೆಂಟ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 124 ರನ್‌ಗಳ ಭರ್ಜರಿ ಜಯ ಗಳಿಸಿದೆ.

 ಎಡ್ಜ್‌ಬ್ಯಾಸ್ಟನ್ ಮೈದಾನದಲ್ಲಿ ರವಿವಾರ ನಡೆದ ಮಳೆ   ಬಾಧಿತ ಪಂದ್ಯದಲ್ಲಿ ಡಕ್‌ವರ್ಥ್ ಲೂಯಿಸ್ ನಿಯಮದಂತೆ ಗೆಲುವಿಗೆ 41 ಓವರ್‌ಗಳಲ್ಲಿ 289 ರನ್ ಗಳಿಸಬೇಕಾದ ಸವಾಲು ಪಡೆದ ಪಾಕಿಸ್ತಾನ ತಂಡ 33.4 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 164 ರನ್‌ಗಳಿಗೆ ಗಳಿಸಿತು.

ಭಾರತದ ಉಮೇಶ್ ಯಾದವ್ (30ಕ್ಕೆ 3), ರವೀಂದ್ರ ಜಡೇಜ(43ಕ್ಕೆ 2), ಹಾರ್ದಿಕ್ ಪಾಂಡ್ಯ(43ಕ್ಕೆ2), ಭುವನೇಶ್ವರ ಕುಮಾರ್ (23ಕ್ಕೆ 1) ದಾಳಿಗೆ ಸಿಲುಕಿದ ಪಾಕಿಸ್ತಾನದ ದಾಂಡಿಗರು ಬಹಳ ಬೇಗನೆ ಇನಿಂಗ್ಸ್ ಇನಿಂಗ್ಸ್ ಮುಗಿಸಿದರು.

  ಅಝರ್ ಅಲಿ 50 ರನ್, ಮುಹಮ್ಮದ್ ಹಫೀಝ್ 33ರನ್ ,ಅಹ್ಮದ್ ಶಹಝಾದ್ 12ರನ್, ಬಾಬರ್ ಅಝಮ್ 8ರನ್, ಶುಐಬ್ ಮಲಿಕ್ 15ರನ್ ನಾಯಕ ಮತ್ತು ವಿಕೆಟ್ ಕೀಪರ್ ಸರ್ಫರಾಝ್ ಅಹ್ಮದ್ 15 ರನ್, ಔಟಾಗಿದ್ದಾರೆ, ಶಹದಾಬ್ ಖಾನ್ 14 ರನ್ ಗಳಿಸಿ ಔಟಾಗದೆ ಉಳಿದರು. ಗಾಯಾಳು ವಹಾಬ್ ರಿಯಾಝ್ ಆಡಲಿಲ್ಲ.ಹೀಗಾಗಿ ಪಾಕ್‌ಗೆ ಕೊನೆಯ ಬ್ಯಾಟ್ಸ್‌ಮನ್ ನೆರವು ದೊರೆಯಲಿಲ್ಲ.

ಮಳೆಯಿಂದಾಗಿ ಆರಂಭದಲ್ಲಿ ಪಾಕಿಸ್ತಾನದ ಗೆಲುವಿಗೆ ಡಿಎಲ್ ನಿಯಮದಂತೆ 48 ಓವರ್‌ಗಳಲ್ಲಿ 324 ರನ್‌ಗಳ ಸವಾಲು ವಿಧಿಸಲಾಗಿತ್ತು. ಆದರೆ ಪಾಕಿಸ್ತಾನ 4.4 ಓವರ್‌ಗಳಲ್ಲಿ 22 ರನ್ ಗಳಿಸಿದ್ಧಾಗ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು. ಇದರಿಂದಾಗಿ ಗೆಲುವಿಗೆ ಪರಿಷ್ಕೃತ ಗುರಿ ನಿಗದಿಪಡಿಸಲಾಗಿತ್ತು. ಬಳಿಕ ಪಾಕಿಸ್ತಾನ ಗೆಲುವಿಗೆ 41 ಓವರ್‌ಗಳಲ್ಲಿ 289 ರನ್ ಗಳಿಸಬೇಕಾದ ಸವಾಲು ಪಡೆಯಿತು.ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನ ಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಭಾರತ ಕಠಿಣ ಸವಾಲು ವಿಧಿಸಿತ್ತು.

ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಭಾರತ 48 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 319 ರನ್ ಗಳಿಸಿತ್ತು.

 ಭಾರತದ ರೋಹಿತ್ ಶರ್ಮ 91 ರನ್(119ಎ, 7ಬೌ,2ಸಿ), ವಿರಾಟ್ ಕೊಹ್ಲಿ ಔಟಾಗದೆ 81 ರನ್(68ಎ, 6ಬೌ,3ಸಿ), ಶಿಖರ್ ಧವನ್ 68ರನ್(65ಎ, 6ಬೌ,1ಸಿ) , ಯುವರಾಜ್ ಸಿಂಗ್ 53ರನ್(32ಎ, 8ಬೌ,1ಸಿ) ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 6 ಎಸೆತಗಳಲ್ಲಿ 3 ಸಿಕ್ಸರ್ ಗಳನ್ನು ಸ್ಫೋಟಕ 20 ರನ್ ಗಳಿಸಿ ತಂಡದ ಸ್ಕೋರ್‌ನ್ನು 300ರ ಗಡಿ ದಾಟಿಸಿದರು. ಭಾರತ: 48 ಓವರ್‌ಗಳಲ್ಲಿ 319/3 ರೋಹಿತ್ ಶರ್ಮ ರನೌಟ್(ಬಾಬರ್/ಅಹ್ಮದ್)91 ಶಿಖರ್ ಧವನ್ ಸಿ ಅಲಿ ಬಿ ಖಾನ್ 68 ವಿರಾಟ್ ಕೊಹ್ಲಿ ಅಜೇಯ 81 ಯುವರಾಜ್ ಸಿಂಗ್ ಎಲ್‌ಬಿಡಬ್ಲು ಹಸನ್ ಅಲಿ 53 ಹಾರ್ದಿಕ್ ಪಾಂಡ್ಯ ಅಜೇಯ 20ತರ 06 ವಿಕೆಟ್ ಪತನ: 1-136, 2-192, 3-285. ಬೌಲಿಂಗ್ ವಿವರ ಮುಹಮ್ಮದ್ ಆಮಿರ್ 8.1-0-32-0 ಮಾದ್ ವಸಿಂ 9.1-0-66-0 ಹಸನ್ ಅಲಿ 10-0-70-1 ವಹಾಬ್ ರಿಯಾಝ್ 8.4-0-87-0 ಶಾದಾಬ್ ಖಾನ್ 10-0-52-1 ಶುಐಬ್ ಮಲಿಕ್ 2-0-10-0 ಪಾಕಿಸ್ತಾನ: 33.4 ಓವರ್‌ಗಳಲ್ಲಿ 164 ರನ್‌ಗೆ ಆಲೌಟ್‌ ಅಝರ್ ಅಲಿ ಸಿ ಪಾಂಡ್ಯ ಬಿ ಜಡೇಜ 50 ಶೆಹಝಾದ್ ಎಲ್‌ಬಿಡಬ್ಲು ಕುಮಾರ್ 12 ಬಾಬರ್ ಆಝಂ ಸಿ ಜಡೇಜ ಬಿ ಯಾದವ್ 08 ಮುಹಮ್ಮದ್ ಹಫೀಝ್ ಸಿ ಕುಮಾರ್ ಬಿ ಜಡೇಜ 33 ಶುಐಬ್ ಮಲಿಕ್ ರನೌಟ್ 15 ಸರ್ಫ್‌ರಾಝ್ ಅಹ್ಮದ್ ಸಿ ಧೋನಿ ಬಿ ಪಾಂಡ್ಯ 15 ಮಾದ್ ವಸಿಂ ಸಿ ಜಾಧವ್ ಬಿ ಪಾಂಡ್ಯ 00 ಶಾದಾಬ್ ಖಾನ್ ಅಜೇಯ 14 ಮಿರ್ ಸಿ ಜಾಧವ್ ಬಿ ಯಾದವ್ 9 ಇತರ 08 ವಿಕೆಟ್‌ಪತನ: 1-47, 2-61, 3-91, 4-114, 5-131, 6-135, 7-151, 8-164, 9-164. ಬೌಲಿಂಗ್ ವಿವರ ಭುವನೇಶ್ವರ ಕುಮಾರ್ 5-1-23-1 ಉಮೇಶ್ ಯಾದವ್ 7.4-1-30-3 ಜಸ್‌ಪ್ರಿತ್ ಬುಮ್ರಾ 5-0-23-0 ಹಾರ್ದಿಕ್ ಪಾಂಡ್ಯ 8-0-43-2 ರವೀಂದ್ರ ಜಡೇಜ 8-0-43-2. ಪಂದ್ಯಶ್ರೇಷ್ಠ: ಯುವರಾಜ್ ಸಿಂಗ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News