ದಕ್ಷಿಣ ಆಫ್ರಿಕ 219/8
ಬರ್ಮಿಂಗ್‌ಹ್ಯಾಮ್, ಜೂ.7: ಭಾರತ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪಾಕಿಸ್ತಾನ ಇಂದು ದಕ್ಷಿಣ ಆಫ್ರಿಕ ವಿರುದ್ಧ ಉತ್ತಮ ಪ್ರದರ್ಶನ ನೀಡಿದೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಐಸಿಸಿ ನಂ.1 ತಂಡ ದಕ್ಷಿಣ ಆಫ್ರಿಕದ ಭರ್ಜರಿ ಬ್ಯಾಟಿಂಗ್‌ಗೆ ಪಾಕಿಸ್ತಾನದ ಬೌಲರ್‌ಗಳು ಕಡಿವಾಣ ಹಾಕಿದ್ದಾರೆ. ದಕ್ಷಿಣ ಆಫ್ರಿಕ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 219 ರನ್ ಗಳಿಸಿದೆ.
ಹಸನ್ ಅಲಿ (24ಕ್ಕೆ 3) ಮತ್ತು ಇಮಾದ್ ವಸೀಮ್(20ಕ್ಕೆ 2),ಜುನೈದ್ ಖಾನ್ (53ಕ್ಕೆ 2),ಮುಹಮ್ಮದ್ ಹಫೀಝ್(51ಕ್ಕೆ 1) ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕ ಡೇವಿಡ್ ಮಿಲ್ಲರ್ ಔಟಾಗದೆ ದಾಖಲಿಸಿದ 75ರನ್ (104ಎ, 1ಬೌ,3ಸಿ) ಗಳ ಕೊಡುಗೆಯ ನೆರವಿನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಆರಂಭಿಕ ದಾಂಡಿಗ ಕ್ವಿಂಟನ್ ಡಿ ಕಾಕ್(33), ಹಾಶಿಮ್ ಅಮ್ಲ(16), ನಾಯಕ ಎಬಿಡಿವಿಲಿಯರ್ಸ್(26), ಕ್ರಿಸ್ ಮೊರಿಸ್(28) ಮತ್ತು ರಬಾಡ (26) ಎರಡಂಕೆಯ ಸ್ಕೋರ್ ದಾಖಲಿಸಿದರು.