ಚಾಂಪಿಯನ್ಸ್ ಟ್ರೋಫಿ: ಭಾರತ 321/6

Update: 2017-06-08 13:30 GMT

ಲಂಡನ್, ಜೂ.8: ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಸಿಡಿಸಿದ ಆಕರ್ಷಕ ಶತಕ(125) ರೋಹಿತ್ ಶರ್ಮ(78) ಹಾಗೂ ಎಂಎಸ್ ಧೋನಿ(63) ಅವರ ಅರ್ಧಶತಕಗಳ ಕೊಡುಗೆಯ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ ತನ್ನ 2ನೆ ಪಂದ್ಯದಲ್ಲಿ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 321 ರನ್ ಕಲೆ ಹಾಕಿದೆ.

ಗುರುವಾರ ಇಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತು. ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಮೊದಲ ವಿಕೆಟ್‌ಗೆ 24.5 ಓವರ್‌ಗಳಲ್ಲಿ 138 ರನ್ ಗಳಿಸಿ ಭರ್ಜರಿ ಆರಂಭ ನೀಡಿದರು.

ನಾಯಕ ವಿರಾಟ್ ಕೊಹ್ಲಿ ಖಾತೆ ತೆರೆಯದೇ ಪೆವಿಲಿಯನ್ ಸೇರಿದರು. ಯುವರಾಜ್ ಸಿಂಗ್ ಕೇವಲ 7 ರನ್ ಗಳಿಸಿದರು. ಆಗ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದ ಧೋನಿ ಅವರು ಧವನ್‌ರೊಂದಿಗೆ ನಾಲ್ಕನೆ ವಿಕೆಟ್‌ಗೆ 82 ರನ್ ಸೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಅಜೇಯ 25 ರನ್ ಗಳಿಸಿದ ಕೇದಾರ್ ಜಾಧವ್ ಶ್ರೀಲಂಕಾ ಗೆಲುವಿಗೆ 322 ರನ್ ಗುರಿ ನೀಡಲು ನೆರವಾದರು.

ಶ್ರೀಲಂಕಾದ ಪರ ಮಾಲಿಂಗ(2-70) ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News