ಜೆಲೆನಾ ಒಸ್ಟಾಪೆಂಕೊಗೆ ಫ್ರೆಂಚ್ ಓಪನ್ ಕಿರೀಟ
Update: 2017-06-10 21:17 IST
ಪ್ಯಾರಿಸ್, ಜೂ.10: ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ಸಿಮೊನಾ ಹಾಲೆಪ್‌ರನ್ನು ಮಣಿಸಿದ ಲಾಟ್ವಿಯದ ಕಿರಿಯ ಆಟಗಾರ್ತಿ ಜೆಲೆನಾ ಒಸ್ಟಾಪೆಂಕೊ ಫ್ರೆಂಚ್ ಓಪನ್‌ನಲ್ಲಿ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಶ್ರೇಯಾಂಕರಹಿತ ಆಟಗಾರ್ತಿ ಜೆಲೆನಾ ಶನಿವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ನಂ.4ನೆ ಆಟಗಾರ್ತಿ ಹಾಲೆಪ್‌ರನ್ನು 4-6, 6-4, 6-3 ಸೆಟ್‌ಗಳ ಅಂತರದಿಂದ ಮಣಿಸಿ ಹೊಸ ದಾಖಲೆ ಬರೆದರು.
ಮೂರು ದಿನಗಳ ಹಿಂದೆ 20ನೆ ವರ್ಷಕ್ಕೆ ಕಾಲಿಟ್ಟಿರುವ ಜೆಲೆನಾ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿ ವಿಶ್ವದ ಗಮನ ಸೆಳೆದರು.