ರೊನಾಲ್ಡೊ ಅವಳಿ ಗೋಲು, ಪೋರ್ಚುಗಲ್ ಜಯಭೇರಿ
Update: 2017-06-10 23:22 IST
ರಿಗಾ,ಜೂ.10: ಫಿಫಾ ವಿಶ್ವಕಪ್-2018ರ ಕ್ವಾಲಿಫೈಯರ್ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಪೋರ್ಚುಗಲ್ ತಂಡ ಲಾಟ್ವಿಯ ತಂಡವನ್ನು 3-0 ಅಂತರದಿಂದ ಮಣಿಸಿದೆ. ಈ ಮೂಲಕ ಪೋರ್ಚುಗಲ್ ‘ಬಿ’ ಗುಂಪಿನಲ್ಲಿ ಸತತ ಐದನೆ ಜಯ ದಾಖಲಿಸಿತು. ಆರು ಪಂದ್ಯಗಳಲ್ಲಿ ಒಟ್ಟು 15 ಅಂಕಗಳನ್ನು ಪಡೆಯಿತು.
ಪೋರ್ಚುಗಲ್‌ನ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಆಗಿರುವ ರೊನಾಲ್ಡೊ ಅವಳಿ ಗೋಲುಗಳನ್ನು ಬಾರಿಸಿ ಟೂರ್ನಿಯಲ್ಲಿ ಒಟ್ಟು 11ನೆ ಗೋಲು ಬಾರಿಸಿದರು. ರೊನಾಲ್ಡೊ ತನ್ನ ದೇಶದ ಪರ ಆಡಿರುವ 139ನೆ ಪಂದ್ಯದಲ್ಲಿ ಒಟ್ಟು 73 ಗೋಲು ಬಾರಿಸಿದ್ದಾರೆ.
41ನೆ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದ ರೊನಾಲ್ಡೊ 62ನೆ ನಿಮಿಷದಲ್ಲಿ ಹೆಡರ್‌ನ ಮೂಲಕ ಮತ್ತೊಂದು ಗೋಲು ಬಾರಿಸಿ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು.