×
Ad

ಹಂಗೇರಿಗೆ ಆಘಾತ ನೀಡಿದ ಅಂಡೋರಾ

Update: 2017-06-10 23:29 IST

ಅಂಡೋರಾ, ಜೂ.10: ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಹಂಗೇರಿ ತಂಡವನ್ನು 1-0 ಗೋಲು ಅಂತರದಿಂದ ಮಣಿಸಿದ ಅಂಡೋರಾ ತಂಡ ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸತತ 66 ಪಂದ್ಯಗಳ ಸೋಲಿನಿಂದ ಹೊರ ಬಂದಿದೆ. ಅಂಡೋರಾ ತಂಡ 13 ವರ್ಷಗಳ ಬಳಿಕ ಮೊದಲ ಜಯ ಸಾಧಿಸಿದೆ.

 ಶುಕ್ರವಾರ ನಡೆದ ಪಂದ್ಯದಲ್ಲಿ ಹಂಗೇರಿ ತಂಡದ ಗೋಲ್‌ಕೀಪರ್ ಪೀಟರ್ ಗುಲಾಸಿಯನ್ನು ವಂಚಿಸಿದ ಮಾರ್ಕ್ ರೆಬೆಸ್ 26ನೆ ನಿಮಿಷದಲ್ಲಿ ಅಂಡೋರಾ ಪರ ಗೆಲುವಿನ ಗೋಲು ಬಾರಿಸಿದ್ದರು.

ಅಂಡೋರಾ ವಿರುದ್ಧ ಶರಣಾಗಿ ಮುಖಭಂಗಕ್ಕೀಡಾಗಿರುವ ಹಂಗೇರಿ ತಂಡ ಮುಂದಿನ ವರ್ಷ ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಅರ್ಹತೆ ಪಡೆಯುವ ವಿಶ್ವಾಸವನ್ನು ಕಳೆದುಕೊಂಡಿದೆ. ‘ಬಿ’ ಗುಂಪಿನಲ್ಲಿ 3ನೆ ಸ್ಥಾನದಲ್ಲಿರುವ ಹಂಗೇರಿ ಎರಡನೆ ಸ್ಥಾನದಲ್ಲಿರುವ ಪೋರ್ಚುಗಲ್ ತಂಡಕ್ಕಿಂತ 8 ಅಂಕ ಹಿಂದಿದೆ. ಪ್ರತಿ ತಂಡಗಳಿಗೆ ಇನ್ನು 4 ಪಂದ್ಯಗಳು ಆಡಲು ಬಾಕಿಯಿವೆೆ.

 ಅಂಡೋರಾ ತಂಡ 2004ರಲ್ಲಿ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಮಾಸೆಡೋನಿಯಾ ತಂಡವನ್ನು 1-0 ಅಂತರದಿಂದ ಮಣಿಸಿದ ಬಳಿಕ ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನು ಗೆದ್ದುಕೊಂಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News