×
Ad

ಇಂಗ್ಲೆಂಡ್ ಫಿಫಾ ಅಂಡರ್-20 ವಿಶ್ವಕಪ್ ಚಾಂಪಿಯನ್

Update: 2017-06-12 23:38 IST

ಸುವಾನ್(ದಕ್ಷಿಣ ಕೊರಿಯಾ),ಜೂ.12: ಮೊದಲಾರ್ಧದಲ್ಲಿ ಡೊಮಿನಿಕ್ ಕಾಲ್ವರ್ಟ್-ಲೂವಿನ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಇಂಗ್ಲೆಂಡ್ ತಂಡ ಅಂಡರ್-20 ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ವೆನೆಜುವೆಲಾ ತಂಡವನ್ನು 1-0 ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

ಇಂಗ್ಲೆಂಡ್ 1966ರ ಬಳಿಕ ಮೊದಲ ಬಾರಿ ಫುಟ್ಬಾಲ್‌ನಲ್ಲಿ ವಿಶ್ವ ಮಟ್ಟದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಇಂಗ್ಲೆಂಡ್ ತಂಡ ದಕ್ಷಿಣ ಕೊರಿಯಾಕ್ಕೆ ಅಂಡರ್-20 ವಿಶ್ವಕಪ್‌ಗೆ ಆಡಲು ಬಂದ ಸಂದರ್ಭದಲ್ಲಿ 20 ವರ್ಷಗಳಿಂದ ವಿಶ್ವಕಪ್ ಪಂದ್ಯವನ್ನು ಗೆದ್ದಿರಲಿಲ್ಲ. ಇದೀಗ ಚಾಂಪಿಯನ್ ಆಗಿರುವ ಆಂಗ್ಲರು ಹೊಸ ಇತಿಹಾಸ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News