×
Ad

ಐಸಿಸಿ ಏಕದಿನ ರ‍್ಯಾಂಕಿಂಗ್: ಅಗ್ರ ಸ್ಥಾನ ವಶಪಡಿಸಿಕೊಂಡ ಕೊಹ್ಲಿ

Update: 2017-06-13 23:34 IST

ಲಂಡನ್, ಜೂ.13: ಐಸಿಸಿ ಏಕದಿನ ರ‍್ಯಾಂಕಿಂಗ್ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ನಂ.1 ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಮೊದಲು ನಂ.1 ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕ ಎಬಿ ಡಿವಿಲಿಯರ್ಸ್‌ಗಿಂತ 22 ಅಂಕ, ಆಸ್ಟ್ರೇಲಿಯದ ಡೇವಿಡ್ ವಾರ್ನರ್‌ಗಿಂತ 19 ಅಂಕದಿಂದ ಹಿಂದಿದ್ದರು. ವಿಲಿಯರ್ಸ್ ಈ ವರ್ಷದ ಫೆಬ್ರವರಿಯಿಂದ ನಂ.1 ಸ್ಥಾನದಲ್ಲಿದ್ದರು.

ಪ್ರಸ್ತುತ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 81 ಹಾಗೂ ದಕ್ಷಿಣ ಆಫ್ರಿಕ ವಿರುದ್ಧ ಅಜೇಯ 76 ರನ್ ಗಳಿಸಿದ್ದ ಕೊಹ್ಲಿ ಐಸಿಸಿ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಡಿವಿಲಿಯರ್ಸ್ ಹಾಗೂ ವಾರ್ನರ್‌ರನ್ನು ಹಿಂದಕ್ಕೆ ತಳ್ಳಿ ನಂ.1 ಸ್ಥಾನಕ್ಕೇರಿದ್ದಾರೆ.

ಕೊಹ್ಲಿ 2017ರ ಜನವರಿಯಲ್ಲಿ ಕೇವಲ ನಾಲ್ಕು ದಿನದ ಮಟ್ಟಿಗೆ ವಿಶ್ವದ ನಂ.1 ಆಟಗಾರನಾಗಿದ್ದರು. ಇದೀಗ ಮತ್ತೊಮ್ಮೆ ಅಗ್ರ ಸ್ಥಾನಕ್ಕೇರಿದ್ದಾರೆ. ಭಾರತದ ಇನ್ನೋರ್ವ ಬ್ಯಾಟ್ಸ್‌ಮನ್ ಶಿಖರ್ ಧವನ್ ಅಗ್ರ-10ಕ್ಕೆ ವಾಪಸಾಗಿದ್ದಾರೆ. ಎಡಗೈ ದಾಂಡಿಗ ಧವನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ 68, ಶ್ರೀಲಂಕಾದ ವಿರುದ್ಧ 125 ಹಾಗೂ ದಕ್ಷಿಣ ಆಫ್ರಿಕದ ವಿರುದ್ಧ 78 ರನ್ ಗಳಿಸಿರುವ ಹಿನ್ನೆಲೆಯಲ್ಲಿ 5 ಸ್ಥಾನ ಭಡ್ತಿ ಪಡೆದು 10ನೆ ಸ್ಥಾನಕ್ಕೇರಿದ್ದಾರೆ.

ಧವನ್ ಭಡ್ತಿ ಪಡೆದರೆ, ಮತ್ತೊಂದೆಡೆ ರೋಹಿತ್ ಶರ್ಮ, ಎಂಎಸ್ ಧೋನಿ ಕ್ರಮವಾಗಿ 13ನೆ ಹಾಗೂ 14ನೆ ಸ್ಥಾನಕ್ಕೆ ಕುಸಿದಿದ್ದಾರೆ. 6 ಸ್ಥಾನ ಗಳಿಸಿರುವ ಯುವರಾಜ್ ಸಿಂಗ್ 88ನೆ ಸ್ಥಾನಕ್ಕೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News