ಸ್ಟಟ್‌ಗರ್ಟ್ ಓಪನ್: ಫೆಡರರ್‌ಗೆ ಟಾಮಿ ಹಾಸ್ ಎದುರಾಳಿ

Update: 2017-06-14 18:18 GMT

ಹೊಸದಿಲ್ಲಿ, ಜೂ.14: ಗಿಲ್ಲೆಸ್ ಸಿಮೊನ್ ಹಾಗೂ ವಿಕ್ಟರ್ ಟ್ರೊಸ್ಕಿ ಸ್ಟಟ್‌ಗರ್ಟ್ ಓಪನ್‌ನ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದು, 10 ವಾರ ವಿಶ್ರಾಂತಿಯ ಬಳಿಕ ಸಕ್ರಿಯ ಟೆನಿಸ್‌ಗೆ ವಾಪಸಾಗಿರುವ ರೋಜರ್ ಫೆಡರರ್ ಅವರು ಟಾಮಿ ಹಾಸ್‌ರನ್ನು ಎದುರಿಸಲಿದ್ದಾರೆ.

39ರ ಪ್ರಾಯದ ಹಾಸ್ ಮಂಗಳವಾರ ನಡೆದ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಪೀರ್-ಹ್ಯೂಸ್ ಹೆರ್ಬರ್ಟ್‌ರನ್ನು 6-3, 4-6, 7-5 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ಎರಡನೆ ಸುತ್ತಿನಲ್ಲಿ ಫೆಡರರ್‌ರಿಂದ ಸವಾಲು ಎದುರಿಸಲಿದ್ದಾರೆ.

ಎಪ್ರಿಲ್‌ನಲ್ಲಿ ಮಿಯಾಮಿ ಓಪನ್ ಪ್ರಶಸ್ತಿ ಜಯಿಸಿದ ಬಳಿಕ ಫೆಡರರ್ ಯಾವುದೇ ಟೂರ್ನಮೆಂಟ್‌ನಲ್ಲಿ ಆಡಿಲ್ಲ. ಆಸ್ಟ್ರೇಲಿಯನ್ ಓಪನ್‌ನಲ್ಲಿ 18ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡ ಬಳಿಕ ಕ್ಲೇ-ಕೋರ್ಟ್ ಟೂರ್ನಿಗಳಿಂದ ಸಂಪೂರ್ಣ ದೂರ ಉಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News