ರೋಹಿತ್ ಶರ್ಮ 11ನೆ ಶತಕ
Update: 2017-06-15 21:24 IST
ಬರ್ಮಿಂಗ್‌ಹ್ಯಾಮ್, ಜೂ.15: ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮ 11ನೆ ಏಕದಿನ ಶತಕ ದಾಖಲಿಸಿದರು.
ಶರ್ಮ 111 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಶತಕ ದಾಖಲಿಸಿದರು. ಮುಸ್ತಫಿಝ್ರಹ್ಮಾನ್ ಅವರ 33ನೆ ಓವರ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಎತ್ತುವ ಮೂಲಕ ರೋಹಿತ್ ಶತಕ ದಾಖಲಿಸಿದರು.