ಚಾಂಪಿಯನ್ಸ್ ಟ್ರೋಫಿ: ಫೈನಲ್‌ಗೆ ಲಗ್ಗೆಯಿಟ್ಟ ಟೀಮ್ ಇಂಡಿಯಾ
ಎಡ್ಜ್‌ಬ್ಯಾಸ್ಟನ್, ಜೂ.15: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನ ಲ್ಲಿ ಭಾರತ ಸತತ ಎರಡನೆ ಬಾರಿ ಫೈನಲ್ ಪ್ರವೇಶಿಸಿದ್ದು, ಜೂ.18ರಂದು ನಡೆಯಲಿರುವ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಇಂದು ನಡೆದ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವಿಗೆ 265 ರನ್‌ಗಳ ಸವಾಲು ಪಡೆದ ಭಾರತ ಇನ್ನೂ 59 ಎಸೆತಗಳು ಬಾಕಿ ಇರುವಂತೆ 1ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಗಳಿಸಿ ಗೆಲುವಿನ ದಡ ಸೇರಿತು. ರೋಹಿತ್ ಶರ್ಮ ಔಟಾಗದೆ 123 ರನ್ (129 ಎ,15 ಬೌ,1ಸಿ)ಮತ್ತು ನಾಯಕ ವಿರಾಟ್ ಕೊಹ್ಲಿ ಔಟಾಗದೆ 96 ರನ್ (78ಎ, 13 ಬೌ)ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇವರು ಎರಡನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 178 ರನ್ ಸೇರಿಸಿದರು. ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಮೊದಲ ವಿಕೆಟ್‌ಗೆ 87 ರನ್‌ಗಳ ಜೊತೆಯಾಟ ನೀಡಿದರು. ಧವನ್ (46 ರನ್ 34 ಎ, 7 ಬೌ,1 ಸಿ) ಗಳಿಸಿ ಔಟಾದರು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 264 ರನ್ ಗಳಿಸಿತ್ತು.