ವೇಗವಾಗಿ 8,000 ರನ್ ಪೂರೈಸಿದ ಕೊಹ್ಲಿ

Update: 2017-06-15 18:14 GMT

ಬರ್ಮಿಂಗ್‌ಹ್ಯಾಮ್, ಜೂ.15: ಭಾರತದ ನಾಯಕ ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 8,000 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್ ಪಂದ್ಯದಲ್ಲಿ ಅಜೇಯ 96 ರನ್ ಗಳಿಸಿದ ಕೊಹ್ಲಿ ಈ ಸಾಧನೆ ಮಾಡಿದರು.

175ನೆ ಇನಿಂಗ್ಸ್‌ನಲ್ಲಿ 8 ಸಾವಿರ ರನ್ ಪೂರೈಸಿದ ಕೊಹ್ಲಿ ದಕ್ಷಿಣ ಆಫ್ರಿಕದ ಎಬಿಡಿ ವಿಲಿಯರ್ಸ್‌ರನ್ನು ಹಿಂದಿಕ್ಕಿದ್ದರು. ವಿಲಿಯರ್ಸ್ 2015ರಲ್ಲಿ 182ನೆ ಇನಿಂಗ್ಸ್‌ನಲ್ಲಿ 8 ಸಾವಿರ ರನ್ ಪೂರೈಸಿದ್ದರು. ಈ ಮೂಲಕ ಸೌರವ್ ಗಂಗುಲಿ(200 ಇನಿಂಗ್ಸ್) ದಾಖಲೆ ಮುರಿದಿದ್ದರು. 2002ರಲ್ಲಿ ಗಂಗುಲಿ ಅವರು ಸಚಿನ್ ತೆಂಡುಲ್ಕರ್(210) ದಾಖಲೆಯನ್ನು ಮುರಿದು 8 ಸಾವಿರದ ಕ್ಲಬ್‌ಗೆ ಪ್ರವೇಶಿಸಿದ್ದರು.

ಗಂಗುಲಿ ದಾಖಲೆ ಮುರಿದ ಧವನ್: ಬಾಂಗ್ಲಾದೇಶದ ವಿರುದ್ಧ 46 ರನ್ ಗಳಿಸಿ ಔಟಾಗಿರುವ ಧವನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 680 ರನ್ ಗಳಿಸಿ ಮಾಜಿ ನಾಯಕ ಸೌರವ್ ಗಂಗುಲಿ(665)ಹೆಸರಲ್ಲಿದ್ದ ಗರಿಷ್ಠ ಸ್ಕೋರ್ ದಾಖಲೆಯನ್ನು ಮುರಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News