ಇಂಡೋನೇಷ್ಯಾ ಓಪನ್: ಪ್ರಣಯ್, ಶ್ರೀಕಾಂತ್ ಕ್ವಾರ್ಟರ್ ಫೈನಲ್‌ಗೆ

Update: 2017-06-15 18:29 GMT

ಹೊಸದಿಲ್ಲಿ, ಜೂ.15: ವಿಶ್ವದ ನಂ.3ನೆ ಆಟಗಾರ ಲೀ ಚೊಂಗ್ ವೀ ಅವರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿದ ಭಾರತದ ಎಚ್.ಎಸ್. ಪ್ರಣಯ್ ಇಂಡೋನೇಷ್ಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಗುರುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪ್ರಣಯ್ ಅವರು ವೀ ಅವರನ್ನು 21-10, 21-8 ಗೇಮ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ದಾಖಲೆ ಏಳನೆ ಇಂಡೋನೇಷ್ಯಾ ಓಪನ್ ಪ್ರಶಸ್ತಿಯ ಮೇಲೆ ಕಣ್ಣಟ್ಟಿದ್ದ ಲೀ ಕನಸನ್ನು ನುಚ್ಚುನೂರು ಮಾಡಿದರು.

ಪುರುಷರ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ 29ನೆ ಸ್ಥಾನದಲ್ಲಿರುವ ಪ್ರಣಯ್ ಆರು ಬಾರಿಯ ಚಾಂಪಿಯನ್ ಹಾಗೂ ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಲೀ ವಿರುದ್ಧ ಮಹತ್ವದ ಗೆಲುವು ಸಾಧಿಸಿದ್ದಾರೆ.

 ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ ಅವರು ಡೆನ್ಮಾರ್ಕ್‌ನ ವಿಶ್ವದ ನಂ.9 ಆಟಗಾರ ಜಾನ್ ಓ’ಜಾರ್ಜೆನ್ಸನ್‌ರನ್ನು 21-15, 20-22, 21-6 ಗೇಮ್‌ಗಳ ಅಂತರದಿಂದ ಮಣಿಸುವುದರೊಂದಿಗೆ ಅಂತಿಮ-8 ಘಟ್ಟ ಪ್ರವೇಶಿಸಿದ್ದಾರೆ.

14ನೆ ರ್ಯಾಂಕಿನ ಶ್ರೀಕಾಂತ್ ಕಳೆದ ವರ್ಷ ರಿಯೋ ಒಲಿಂಪಿಕ್ಸ್‌ನಲ್ಲಿ ಜಾರ್ಜೆನ್ಸನ್‌ರನ್ನು 21-19, 21-19 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಇದೀಗ ಅದೇ ಪ್ರದರ್ಶನವನ್ನು ಪುನರಾವರ್ತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News