"ಯುವರಾಜ್ ಜೊತೆ ಯುವರಾಜ್": ಸ್ಟಾರ್ ಆಟಗಾರನ ವಿಶಿಷ್ಟ ಫೋಟೊ ವೈರಲ್

Update: 2017-06-16 16:23 GMT

ಹೊಸದಿಲ್ಲಿ, ಜೂ.16: ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದ್ದ ನಂತರ ಯುವರಾಜ್ ಸಿಂಗ್ ಗೆ ಮತ್ತೊಂದು ಅಚ್ಚರಿ ಕಾದಿತ್ತು. ಕ್ರೀಡಾಂಗಣದ ಹೊರಗೆ ಯುವಿ ಜೊತೆ ಫೋಟೊ ಕ್ಲಿಕ್ಕಿಸಲು ನಿಂತಿದ್ದ ಜನರ ನಡುವೆ ಒಬ್ಬ ವ್ಯಕ್ತಿಯನ್ನು ಕಂಡ ಯುವರಾಜ್ ಸಿಂಗ್ ಆಶ್ಚರ್ಯಕ್ಕೊಳಗಾದರು.

ಯುವರಾಜ್ ಸಿಂಗ್ ರಂತೆಯೇ ಕಾಣುವ ಅಭಿಮಾನಿಯೊಬ್ಬರು ಅವರಂತೆಯೇ ಜರ್ಸಿ ತೊಟ್ಟು ಎಲ್ಲರ ಗಮನಸೆಳೆದರು. ನಂತರ ಇವರಿಬ್ಬರು ಫೋಟೊ ಕ್ಲಿಕ್ಕಿಸಿಕೊಂಡಿದ್ದು, ಬಿಸಿಸಿಐ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ಈ ಫೋಟೊ ವೈರಲ್ ಆಗುತ್ತಿದೆ.

YUVSTRONG12 X 2 ಎಂದು ಬಿಸಿಸಿಐ ಈ ಫೊಟೊವನ್ನು ಪೋಸ್ಟ್ ಮಾಡಿದ್ದು, ಟ್ವಿಟ್ಟರಿಗರಿಂದ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಆನ್ ಲೈನ್ ನಲ್ಲಿ ಈ ಚಿತ್ರ ಪೋಸ್ಟ್ ಆಗುತ್ತಿದ್ದಂತೆ 8000 ಲೈಕ್ ಗಳು ಹಾಗೂ 1000 ರಿಟ್ವೀಟ್ ಗಳು ಸಿಕ್ಕಿವೆ, ಕೆಲವರು ಈ ಚಿತ್ರಕ್ಕೆ “ಇದು ಮೇಣದ ಪ್ರತಿಮೆಯೇ” ಎಂದು ಟ್ವೀಟ್ ಮಾಡಿದ್ದರೆ, ಇಬ್ಬರು “ಇವರಲ್ಲಿ ಯುವರಾಜ್ ಯಾರು” ಎಂದು ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News