ಇಂಡೋನೇಷ್ಯಾ ಓಪನ್: ಪ್ರಣಯ್, ಶ್ರೀಕಾಂತ್ ಸೆಮಿ ಫೈನಲ್‌ಗೆ
Update: 2017-06-16 23:44 IST
ಜಕಾರ್ತ, ಜೂ.16: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎಚ್.ಎಸ್.ಪ್ರಣಯ್ ಹಾಗೂ ಕಿಡಂಬಿ ಶ್ರೀಕಾಂತ್ ಇಂಡೋನೇಷ್ಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
24ರ ಹರೆಯದ ಶ್ರೀಕಾಂತ್ ಶುಕ್ರವಾರ ನಡೆದ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.19ನೆ ಆಟಗಾರ ಚೈನೀಸ್ ತೈಪೆಯ ಝು ವೀ ವಾಂಗ್‌ರನ್ನು 21-15, 21-14 ಗೇಮ್‌ಗಳ ಅಂತರದಿಂದ ಮಣಿಸಿ ಅಂತಿಮ ನಾಲ್ಕರ ಸುತ್ತು ತಲುಪಿದರು.
ಶ್ರೀಕಾಂತ್ ಅವರು ವಾಂಗ್ ವಿರುದ್ಧ ಆಡಿರುವ ಎರಡನೆ ಪಂದ್ಯದಲ್ಲಿ ಸತತ ಗೆಲುವು ಸಾಧಿಸಿದ್ದಾರೆ. ವಾಂಗ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಲಿನ್ ಡಾನ್‌ರನ್ನು ಮಣಿಸಿದ್ದರು.
ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಪ್ರಣಯ್ ಒಲಿಂಪಿಕ್ಸ್ ಚಾಂಪಿಯನ್ ಚೆನ್ ಲಾಂಗ್‌ರನ್ನು 21-18, 16-21, 21-19 ಗೇಮ್‌ಗಳ ಅಂತರದಿಂದ ಸೋಲಿಸಿ ಮಹತ್ವದ ಗೆಲುವು ಸಾಧಿಸಿದ್ದಾರೆ.