×
Ad

ನಾನು ಸಂಪೂರ್ಣ ಫಿಟ್ ಇದ್ದೇನೆ: ಬುಮ್ರಾ

Update: 2017-06-16 23:57 IST

ಬರ್ಮಿಂಗ್‌ಹ್ಯಾಮ್, ಜೂ.16: ‘‘ಆಯ್ಕೆಗಾರರು ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ವೆಸ್ಟ್‌ಇಂಡೀಸ್ ವಿರುದ್ಧದ ಸೀಮಿತ ಓವರ್ ಸರಣಿಯಿಂದ ವಿಶ್ರಾಂತಿ ಪಡೆಯುವಂತೆ ಸೂಚಿಸಿತ್ತು. ನಾನು ಯಾವುದೇ ಗಾಯದ ಸಮಸ್ಯೆಯಿಲ್ಲ. ನಾನು ಸಂಪೂರ್ಣ ಫಿಟ್ ಇದ್ದೇನೆ.’’ ಎಂದು ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಹೇಳಿದ್ದಾರೆ.

ಪ್ರಸ್ತುತ ಶ್ರೇಷ್ಠ ಫಾರ್ಮ್‌ನಲ್ಲಿರುವ ತಾವು ವಿಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿದಿರುವುದಕ್ಕೆ ಬೇಸರಗೊಂಡಿದ್ದೀರಾ? ಎಂದು ಕೇಳಿದಾಗ,‘‘ನನಗೆ ಇದರಿಂದ ಬೇಸರವಾಗಿಲ್ಲ. ನಾನು ಆಯ್ಕೆಗಾರರು ಹೇಳಿದಂತೆ ಮಾಡುತ್ತೇನೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಚೆಂಡು ಚೆನ್ನಾಗಿ ಸ್ವಿಂಗ್ ಆಡುತ್ತಿದ್ದು, ಇದು ಲಯ ಕಂಡುಕೊಳ್ಳಲು ನೆರವಾಗಿದೆ. ತಂಡದ ಯಶಸ್ಸಿನಲ್ಲಿ ಕಾಣಿಕೆ ನೀಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ’’ ಎಂದು ಬುಮ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News