10 ವರ್ಷಗಳ ಬಳಿಕ ಐಸಿಸಿ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ

Update: 2017-06-17 18:11 GMT

ಲಂಡನ್, ಜೂ.18: ಹತ್ತು ವರ್ಷಗಳ ಬಳಿಕ ಭಾರತ ಮತ್ತು ಪಾಕಿಸ್ತಾನ ಐಸಿಸಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗಿದೆ. 2007ರಲ್ಲಿ ದಕ್ಷಿಣ ಅಫ್ರಿಕದಲ್ಲಿ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಸಾಂಪದ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಜಯಿಸಿ ಚೊಚ್ಚಲ ಚಾಂಪಿಯನ್ ಎನಿಸಿಕೊಂಡಿತ್ತು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನಕ್ಕೆ ಈ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.

ಟ್ವೆಂಟಿ-20 ಮತ್ತು 50 ಓವರ್‌ಗಳ ವಿಶ್ವಕಪ್ ಗೆದ್ದುಕೊಂಡಿರುವ ಪಾಕಿಸ್ತಾನಕ್ಕೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ತನಕ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ನಾಯಕ ಸರ್ಫರಾಝ್ ಅಹ್ಮದ್ ಪಾಕ್‌ಗೆ ಪಶಸ್ತಿ ತಂದು ಕೊಡುವ ಹೋರಾಟಕ್ಕೆ ಧುಮುಕಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿ ಐಸಿಸಿ ಯ ಪ್ರಮುಖ ಟೂರ್ನಮೆಂಟ್‌ನಲ್ಲಿ ಭಾರತವನ್ನು ಮುನ್ನಡೆಸುತ್ತಿದ್ದಾರೆ.ಅವರಿಗೂ ಟ್ರೋಫಿ ಎತ್ತುವ ಛಲ .

ಕೊಹ್ಲಿ ಪಡೆಯು ಪಾಕಿಸ್ತಾನವನ್ನು ಮಣಿಸಬೇಕಾದದರೆ ಮೂರು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ವಿವರ ಇಂತಿವೆ.
ಫಾಖರ್ ಝಾಮನ್ ಬೇಗನೆ ನಿರ್ಗಮನ: ಪಾಕಿಸ್ತಾನದ ಆರಂಭಿಕ ದಾಂಡಿಗ  ಫಾಖರ್ ಝಮಾನ್ ಅವರನ್ನು ಕೊಹ್ಲಿ ಪಡೆ ಬೇಗನೆ ಪೆವಿಲಿಯನ್‌ಗೆ ಅಟ್ಟಬೇಕಾಗಿದೆ. ಝಮಾನ್ ಟೂರ್ನಮೆಂಟ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 2 ಅರ್ದಶತ ದಾಖಲಿಸಿದ್ದರು.

ಲಂಕಾ ವಿರುದ್ಧ 50ರನ್, ಇಂಗ್ಲೆಂಡ್ ವಿರುದ್ಧ 57 ರನ್ ಮತ್ತು ದಕ್ಷಿಣ ಆಫ್ರಿಕ ವಿರುದ್ಧ 31 ರನ್ ಗಳಿಸಿದ್ದರು. ಇವರ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರೆ ಪಾಕ್‌ಗೆ ದೊಡ್ಡ ಮೊತ್ತದ ಸವಾಲು ಸೇರಿಸಲು ಸಾಧ್ಯವಿಲ್ಲ.

 ಸರ್ಫರಾಝ್ ಅಹ್ಮದ್ ಪ್ರಮುಖ ಆಟಗಾರ: ನಾಯಕ ಸರ್ಫರಾಝ್ ಅಹ್ಮದ್ ಅವರು ಒತ್ತಡದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಪಾಕ್ ಸೋತಾಗ ತವರಿನಲ್ಲಿ ಏನಾಗಿತ್ತು ಎನ್ನುವುದನ್ನು ಸರ್ಫರಾಝ್ ನೋಡಿದ್ದಾರೆ. ಇದರಿಂದಾಗಿ ಅವರು ಗೆಲುವಿನ ಮಂತ್ರ ಜಪಿಸುತ್ತಿದ್ಧಾರೆ. ಗೆಲುವಿನ ಮಹತ್ವವನ್ನು ಅರಿತುಕೊಂಡಿರುವ ಸರ್ಫರಾಝ್ ಅವರು ಕಳೆದ ಲಂಕಾ ವಿರುದ್ಧದ ಪಂದ್ಯದಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟದ್ದರು. ಇಂಗ್ಲೆಂಡ್‌ನ್ನು ಸೆಮಿಫೈನಲ್‌ನಲ್ಲಿ 211 ರನ್‌ಗಳಿಗೆ ನಿಯಂತ್ರಿಸಿದ್ದರು. ಅವರು ಭಾರತಕ್ಕೆ ಅಪಾಯಕಾರಿ ಆಟಗಾರ.

ಹಸನ್ ಅಲಿ ಪ್ರಹಾರ: ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ತನಕ ಉತ್ತಮ ಫಾರ್ಮ್‌ನಲ್ಲಿದ್ದಾರೆ.ನಾಲ್ಕು ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ದಕ್ಷಿಣ ಆಫ್ರಿಕ ,ಶ್ರೀಲಂಕಾ ಮತ್ತು ಇಂಗ್ಲೆಂಡ್ ವಿರುದ್ಧ ತಲಾ 3 ವಿಕೆಟ್ ಪಡೆದಿದ್ದರು. ಭಾರತದ ವಿರುದ್ಧ 1 ವಿಕೆಟ್ ಉಡಾಯಿಸಿದ್ದರು.20 ಏಕದಿನ ಪಂದ್ಯಗಳನ್ನು ಆಡಿರುವ ಅವರು 39 ವಿಕೆಟ್‌ಗಳನ್ನು ತನ್ನ ಖಾತೆಗೆ ಜಮೆ ಮಾಡಿದ್ದಾರೆ. ಭಾರತದ ದಾಂಡಗರು ಮತ್ತೊಮ್ಮೆ ಎಚ್ಚರ ವಹಿಸಿ ಆಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News