ಹಾಕಿ ಲೀಗ್‌ನಲ್ಲಿ ಭಾರತ-ಪಾಕ್ ಹಣಾಹಣಿ

Update: 2017-06-17 18:18 GMT

ಲಂಡನ್, ಜೂ.17: ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಚಾಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಓವಲ್ ಕ್ರೀಡಾಂಗಣದಲ್ಲಿ ಇಳಿದ ಬೆನ್ನಲ್ಲೇ ಭಾರತದ ಹಾಕಿ ತಂಡ ಲೀ ವ್ಯಾಲಿ ಆ್ಯಂಡ್ ಟೆನಿಸ್ ಸೆಂಟರ್‌ನಲ್ಲಿ ಹಾಕಿ ವರ್ಲ್ಡ್ ಲೀಗ್‌ನಲ್ಲಿ ಸೆಮಿಫೈನಲ್ ಪಾಕ್‌ನ್ನು ಎದುರಿಸಲಿದೆ.
ಸಾಂಪದ್ರಾಯಿಕ ಎದುರಾಳಿಗಳ ಹಣಾಹಣಿಗೆ ಲಂಡನ್‌ನಲ್ಲಿ ವೇದಿಕೆ ಸಜ್ಜಾಗಿದೆ.ಕ್ರಿಕೆಟ್ ಮತ್ತು ಹಾಕಿ ಪಂದ್ಯ ನಡೆಯುವ ಕ್ರೀಡಾಂಗಣದ ಅಂತರ 55ಮೈಲು ದೂರ. ಎರಡೂ ಪಂದ್ಯಗಳಿಗೂ ಭಾರೀ ಸಂಖ್ಯೆಯಲ್ಲಿ ಉಭಯ ತಂಡಗಳ ಅಭಿಮಾನಿಗಳು ಪಾಲ್ಗೊಳಲ್ಳಿದ್ದಾರೆ.

ಕ್ರಿಕೆಟ್ ಹಾಗೂ ಹಾಕಿ ಅಭಿಮಾನಿಗಳ ಪಾಲಿಗೆ ರವಿವಾರ ‘ಸೂಪರ್ ಸಂಡೆ’ಯಾಗಿದೆ.

 ಯಾರಿಗೆ ಕ್ರಿಕೆಟ್ ವೀಕ್ಷಣೆಗೆ ಟಿಕೆಟ್ ಸಿಗಲಿಲ್ಲವೋ ಅಂಥರು ನೇರವಾಗಿ ಮಿಲ್ಟಾನ್ ಕೇನ್ಸ್‌ಗೆ ಅರ್ಧಗಂಟೆಯಲ್ಲಿ ತಲುಪಿ ಹಾಕಿ ಪಂದ್ಯದ ವೀಕ್ಷಣೆಗೆ ಅವಕಾಶ ಪಡೆಯಬಹುದಾಗಿದೆ.

ಬಾಲಿವುಡ್ ತಾರೆಯರು, ರಾಜಕಾರಣಿಗಳು ಕ್ರಿಕೆಟ್ ಹಾಗೂ ಹಾಕಿ ಹೈ ವೋಲ್ಟೇಜ್ ಪಂದ್ಯದ ವೀಕ್ಷಣೆಗೆ ಲಂಡನ್‌ಗೆ ಲಗ್ಗೆ ಇಟ್ಟಿದ್ದಾರೆ.

ಭಾರತ -ಪಾಕಿಸ್ತಾನ 6 ಪ್ರಮುಖ ಪಂದ್ಯ

  *1960 ಒಲಿಂಪಿಕ್ಸ್ ಪಂದ್ಯ: ಪಾಕಿಸ್ತಾನ 1960ರಲ್ಲಿ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತವನ್ನು 1-0 ಅಂತರದಲ್ಲಿ ಮಣಿಸಿ ಚಿನ್ನ ಗಳಿಸಿತ್ತು.
 *1975 ವರ್ಲ್ಡ್ ಕಪ್: ಭಾರತವು ಪಾಕಿಸ್ತಾನವನ್ನು ಮಣಿಸಿ ಟ್ರೋಫಿಯನ್ನು ಎತ್ತಿಕೊಂಡಿತ್ತು.
*2002, 2003, 2004 ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವನ್ನು ಮಣಿಸಿದ ಪಾಕಿಸ್ತಾನ ಮೂರನೆ ಸ್ಥಾನ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News