ಗಂಭೀರ್ 4 ಪಂದ್ಯಗಳಿಗೆ ಅಮಾನತು
Update: 2017-06-17 23:52 IST
ಹೊಸದಿಲ್ಲಿ, ಜೂ.17: ದಿಲ್ಲಿ ರಣಜಿ ತಂಡದ ನಾಯಕ ಗೌತಮ್ ಗಂಭೀರ್ ಅವರು ಕೋಚ್ ಜೊತೆ ವಾಗ್ವಾದ ನಡೆಸಿದ ಆರೋಪದಲ್ಲಿ ನಾಲ್ಕು ಪ್ರಥಮ ದರ್ಜೆ ಪಂದ್ಯಗಳಿಂದ ಅಮಾನತುಗೊಂಡಿದ್ದಾರೆ.
ಕಳೆದ ವಿಜಯ್ ಹಝಾರೆ ಟ್ರೋಫಿ ಪಂದ್ಯದ ವೇಳೆ ಗಂಭೀರ್ ಅವರು ಅಂಪೈರ್ ವಿಜಯ್ ಭಾಸ್ಕರ್ ಜೊತೆ ವಾಗ್ವಾದ ನಡೆಸಿದರೆಂಬ ಆರೋಪದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಗಂಭೀರ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಲು ಮದನ್‌ಲಾಲ್, ರಾಜೇಂದ್ರ ಆರ್ ರಾಠೋಡ್ ಮತ್ತು ವಕೀಲರಾದ ಸೋನಿ ಸಿಂಗ್ ಅವರನ್ನೊಳಗೊಂಡ ಸಮಿತಿ ರಚಿಸಲಾಗಿತ್ತು.
ಮೂವರು ಸದಸ್ಯರ ಸಮಿತಿ ನೀಡಿದ ವರದಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.