×
Ad

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌: ಫಾಖರ್ ಝಮಾನ್ ಶತಕ

Update: 2017-06-18 17:35 IST

ಲಂಡನ್, ಜೂ.18: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಆರಂಭಿಕ ದಾಂಡಿಗ ಫಾಖರ್ ಝಮಾನ್ ಶತಕ ಸಿಡಿಸಿದ್ದಾರೆ.

ಫಾಖರ್ ನಾಲ್ಕನೆ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದರು. 92 ಎಸೆತಗಳಲ್ಲಿ 12 ಬೌಂಡರಿ 2 ಸಿಕ್ಸರ್ ನೆರವಿನಿಂದ ಫಾಖರ್ ಶತಕ ದಾಖಲಿಸಿದರು.
ಫಾಖರ್ ಮತ್ತು ಅಝರ್ ಅಲಿ ಮೊದಲ ವಿಕೆಟ್‌ಗೆ 23 ಓವರ್‌ಗಳಲ್ಲಿ 128 ರನ್‌ಗಳ ಜೊತೆಯಾಟ ನೀಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಪಾಕಿಸ್ತಾನ 31 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 186 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News