×
Ad

ಭಾರತದ ಡ್ರೆಸ್ಸಿಂಗ್ ರೂಮ್‌ನಲ್ಲಿ ತೆಂಡುಲ್ಕರ್ ಹೆಲ್ಮೆಟ್!

Update: 2017-06-18 22:53 IST

ಲಂಡನ್, ಜೂ.18: ಚಾಂಪಿಯನ್ ಆಟಗಾರ ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಕ್ರಿಯ ಕ್ರಿಕೆಟಿಗರಾಗಿದ್ದಾಗ ಯುವ ಆಟಗಾರರಿಗೆ ಸದಾ ಸ್ಫೂರ್ತಿಯಾಗಿದ್ದರು. ಪ್ರಸ್ತುತ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರೂ ಆಟಗಾರರಿಗೆ ಅವರ ಸಾಧನೆ ಸ್ಫೂರ್ತಿಯಾಗಲಿಯೆಂಬ ಸದುದ್ದೇಶದಿಂದ ಪಾಕಿಸ್ತಾನ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಆಡಲಿರುವ ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನ ಗೋಡೆಗೆ ತೆಂಡುಲ್ಕರ್ ಹೆಲ್ಮೆಟ್‌ನ್ನು ನೇತು ಹಾಕಲಾಗಿದೆ.

ತೆಂಡುಲ್ಕರ್‌ರ ಹೆಲ್ಮೆಟ್‌ನ್ನು ಗೋಡೆಗೆ ನೇತುಹಾಕಲಾಗಿದ್ದು, ಅದರ ಜೊತೆಗೆ ಗೋಡೆಯ ಮೇಲೆ ತೆಂಡುಲ್ಕರ್ ಹಸ್ತಾಕ್ಷರ, 25 ಟೆಸ್ಟ್, 75 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಎಂದು ಬರೆಯಲಾಗಿದೆ. ಈ ಚಿತ್ರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತನ್ನ ಅಧಿಕೃತ ಟ್ವೀಟ್ ಪೇಜ್‌ನಲ್ಲಿ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News