×
Ad

ಬಾಸ್ಕೆಟ್‌ಬಾಲ್: ಅಮೃತ್‌ಪಾಲ್‌ಗೆ ಆಹ್ವಾನ

Update: 2017-06-19 23:48 IST

ಬೆಂಗಳೂರು, ಜೂ.19: ಚೀನಾದಲ್ಲಿ ನಡೆಯಲಿರುವ ಅಟ್ಲಾಸ್ ಚಾಲೆಂಜ್‌ಗೆ ಭಾರತದ ಬಾಸ್ಕೆಟ್‌ಬಾಲ್ ಆಟಗಾರ ಅಮೃತ್‌ಪಾಲ್ ಸಿಂಗ್‌ಗೆ ಸಿಡ್ನಿ ಕಿಂಗ್ಸ್ ತಂಡ ಆಹ್ವಾನ ನೀಡಿದೆ.

ಅಟ್ಲಾಸ್ ಚಾಲೆಂಜ್‌ನಲ್ಲಿ ವಿವಿಧ ದೇಶಗಳ 8 ತಂಡಗಳು ಭಾಗವಹಿಸಲಿದ್ದು, ಟೂರ್ನಿಯು ಜು.16 ರಿಂದ 25ರ ತನಕ ಶಾಂೈನಲ್ಲಿ ನಡೆಯಲಿದೆ.

ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯದ ಮೆಲ್ಬೋರ್ನ್‌ನಲ್ಲಿ ನ್ಯಾಶನಲ್ ಬಾಸ್ಕೆಟ್‌ಬಾಲ್ ಲೀಗ್‌ನಲ್ಲಿ ಹಲವು ತಂಡಗಳೊಂದಿಗೆ ಆಡಿದ್ದ ಸಿಂಗ್‌ಗೆ ಇದು ಅಪೂರ್ವ ಅವಕಾಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News