ಏಗೊನ್ ಚಾಲೆಂಜರ್: ಭಾಂಬ್ರಿ ಎರಡನೆ ಸುತ್ತಿಗೆ ಪ್ರವೇಶ

Update: 2017-06-20 18:11 GMT

ಲಂಡನ್, ಜೂ.20: ಕೆನಡಾದ ಪೀಟರ್ ಪೊಲ್ಯಾನ್‌ಸ್ಕಿ ಅವರನ್ನು ಮಣಿಸಿರುವ ಭಾರತದ ಶ್ರೇಯಾಂಕರಹಿತ ಆಟಗಾರ ಯೂಕಿ ಬಾಂಬ್ರಿ ಏಗೊನ್ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಎರಡನೆ ಸುತ್ತಿಗೆ ತಲುಪಿದ್ದಾರೆ.

127,000 ಯುರೋ ಬಹುಮಾನ ಮೊತ್ತದ ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಭಾಂಬ್ರಿ ಅವರು ಪೀಟರ್‌ರನ್ನು 6-7(4), 7-6(7), 6-3 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

ಎರಡು ಗಂಟೆ ಹಾಗೂ 35 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾಂಬ್ರಿ ಮೊದಲ ಸೆಟ್‌ನ್ನು ಟೈ-ಬ್ರೇಕ್‌ನಲ್ಲಿ 6-7(4) ಅಂತರದಿಂದ ಸೋತಿದ್ದರು. ಎರಡನೆ ಸೆಟ್‌ನ್ನು ಟೈ-ಬ್ರೇಕ್‌ನಲ್ಲಿ 7-6(7) ಅಂತರದಿಂದ ಗೆದ್ದುಕೊಂಡಿರುವ ಬಾಂಬ್ರಿ ಪಂದ್ಯವನ್ನು ಮೂರನೆ ಸೆಟ್‌ಗೆ ವಿಸ್ತರಿಸಿದರು. ಮೂರನೆ ಸೆಟ್‌ನ್ನು 6-3 ಅಂತರದಿಂದ ಜಯಿಸಿ ಎರಡನೆ ಸುತ್ತಿಗೆ ತೇರ್ಗಡೆಯಾದರು.

ಈ ಗೆಲುವಿನೊಂದಿಗೆ ಯೂಕಿ ಕೆನಡಾ ಆಟಗಾರನ ವಿರುದ್ಧ ಸೇಡು ತೀರಿಸಿಕೊಂಡರು. ಫ್ರೆಂಚ್ ಓಪನ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯೂಕಿ ಅವರು ಪೀಟರ್‌ಗೆ ಸೋತಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News