ಪಾಕ್ ಕ್ರಿಕೆಟ್ ನಾಯಕ ಸರ್ಫರಾಝ್‌ಗೆ ವೀರೋಚಿತ ಸ್ವಾಗತ

Update: 2017-06-20 18:16 GMT

ಕರಾಚಿ, ಜೂ.20: ಪಾಕಿಸ್ತಾನದ ಕ್ರಿಕೆಟ್ ನಾಯಕ ಸರ್ಫರಾಝ್ ಅಹ್ಮದ್ ಮಂಗಳವಾರ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಕರಾಚಿಗೆ ಆಗಮಿಸಿದ್ದು, ಅವರಿಗೆ ವೀರೋಚಿತ ಸ್ವಾಗತ ನೀಡಲಾಯಿತು.

ಲಂಡನ್‌ನಲ್ಲಿ ರವಿವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತವನ್ನು 180 ರನ್‌ಗಳ ಅಂತರದಿಂದ ಮಣಿಸಿದ್ದ ಪಾಕ್ ದೀರ್ಘ ಸಮಯದ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್‌ಪಟ್ಟಕ್ಕೇರಿತ್ತು.
ಸರ್ಫರಾಝ್ ನಿವಾಸದ ಹೊರಗೆ ಫಲಕಗಳನ್ನು ಹಿಡಿದಿದ್ದ ಕ್ರಿಕೆಟ್ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಜನಜಂಗುಳಿಯನ್ನು ನಿಯಂತ್ರಿಸಲು ಸ್ಥಳೀಯ ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದರು.

ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಕಳೆದ 25 ವರ್ಷಗಳಿಂದ ಐಸಿಸಿ ಏಕದಿನ ಕ್ರಿಕೆಟ್ ಪ್ರಶಸ್ತಿಗಾಗಿ ಎದುರು ನೋಡುತ್ತಿದ್ದರು. ಅವರ ದೀರ್ಘಕಾಲದ ಕನಸನ್ನು ಅಹ್ಮದ್ ನೇತೃತ್ವದ ಪಾಕ್ ತಂಡ ನನಸು ಮಾಡಿದೆ. ಈ ಹಿಂದೆ 1992ರಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ನಲ್ಲಿ ಇಮ್ರಾನ್ ಖಾನ್ ನಾಯಕತ್ವದ ಪಾಕ್ ತಂಡ ಕೊನೆಯ ಬಾರಿ ಏಕದಿನ ವಿಶ್ವಕಪ್ ಟ್ರೋಫಿ ಜಯಿಸಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News