ಎಚ್‌ಡಬ್ಲ್ಯು ಸೆಮಿಫೈನಲ್: ಭಾರತದ ಮಹಿಳಾ ತಂಡಕ್ಕೆ ರಾಣಿ ರಾಂಪಾಲ್ ನಾಯಕಿ

Update: 2017-06-21 18:30 GMT

ಹೊಸದಿಲ್ಲಿ, ಜೂ.21: ದಕ್ಷಿಣ ಆಫ್ರಿಕದ ಜೋಹಾನ್ಸ್‌ಬರ್ಗ್‌ನಲ್ಲಿ ಜುಲೈ 8ರಿಂದ ಆರಂಭವಾಗಲಿರುವ ಹಾಕಿ ವರ್ಲ್ಡ್ ಲೀಗ್ ಸೆಮಿ ಫೈನಲ್‌ನಲ್ಲಿ ಸ್ಟ್ರೈಕರ್ ರಾಣಿ ರಾಂಪಾಲ್ 18 ಸದಸ್ಯೆಯರನ್ನು ಒಳಗೊಂಡ ಭಾರತೀಯ ಮಹಿಳಾ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದಾರೆ.

ತಂಡದಲ್ಲಿ ಅನುಭವಿ ಆಟಗಾರ್ತಿಯರಾದ ದೀಪಾ ಗ್ರೇಸ್ ಎಕ್ಕಾ, ಸುನಿತಾ ಲಾಕ್ರಾ, ಮೊನಿಕಾ, ಸುಶೀಲಾ ಹಾಗೂ ಗುರ್ಜಿತ್ ಕೌರ್ ಅವರಿದ್ದಾರೆ.

 ತಂಡದಲ್ಲಿ ಇಬ್ಬರು ಗೋಲ್‌ಕೀಪರ್‌ಗಳಾದ ಸವಿತಾ ಹಾಗೂ ರಜನಿ ಅವರಿದ್ದಾರೆ. ಮಿಡ್ ಫೀಲ್ಡರ್ ವಿಭಾಗದಲ್ಲಿ ರಿತು ರಾಣಿ, ಲಿಲಿಮಾ ಮಿಂಝ್, ನವಜೋತ್ ಕೌರ್, ರೇಣುಕಾ ಯಾದವ್, ನಿಕ್ಕಿ ಪ್ರಧಾನ್ ಹಾಗೂ ನಮಿತಾ ಟೊಪ್ಪೊ ಅವರಿದ್ದಾರೆ.

ಫಾರ್ವರ್ಡ್ ವಿಭಾಗದಲ್ಲಿ ರಾಣಿ, ವಂದನಾ ಕಟಾರಿಯ, ಪ್ರೀತಿ ದುಬೆ, ಅನುಪಾ ಬಾರ್ಲ ಹಾಗೂ ರೀನಾ ಖೋಕರ್ ಅವರಿದ್ದಾರೆ.

ಈ ಹಿಂದೆ ನ್ಯೂಝಿಲೆಂಡ್‌ಗೆ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಆತಿಥೇಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ 5-0 ಅಂತರದಿಂದ ಸೋತಿತ್ತು. ಇದೀಗ ಹಾಕಿ ವರ್ಲ್ಡ್ ಲೀಗ್ ಸೆಮಿಫೈನಲ್(ವನಿತೆಯರು)ನಲ್ಲಿ ಉತ್ತಮ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ. ಈ ಟೂರ್ನಿಯು ಲಂಡನ್‌ನಲ್ಲಿ ನಡೆಯಲಿರುವ 2018ರ ವನಿತೆಯರ ವಿಶ್ವಕಪ್‌ಗೆ ಅರ್ಹತಾ ಟೂರ್ನಿಯಾಗಿದೆ.

ಭಾರತ ಬಿ ಗುಂಪಿನಲ್ಲಿ ಅರ್ಜೆಂಟೀನ, ದಕ್ಷಿಣ ಆಫ್ರಿಕ, ಚಿಲಿ ಹಾಗೂ ಅಮೆರಿಕ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಟೂರ್ನಿಯಲ್ಲಿ ಜರ್ಮನಿ, ಇಂಗ್ಲೆಂಡ್, ಐರ್ಲೆಂಡ್, ಜಪಾನ್ ಹಾಗೂ ಪೊಲೆಂಡ್ ತಂಡಗಳು ಭಾಗವಹಿಸಲಿವೆ.

ಭಾರತ ಜು.8 ರಂದು ದಕ್ಷಿಣ ಆಫ್ರಿಕವನ್ನು ಎದುರಿಸುವ ಮೂಲಕ ಹಾಕಿ ವರ್ಲ್ಡ್‌ಲೀಗ್ ಸೆಮಿಫೈನಲ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಭಾರತದ ಮಹಿಳಾ ಹಾಕಿ ತಂಡ

ಗೋಲ್‌ಕೀಪರ್‌ಗಳು: ಸವಿತಾ, ರಜನಿ.

ಡಿಫೆಂಡರ್‌ಗಳು: ದೀಪ್ ಗ್ರೆಸ್ ಎಕ್ಕಾ, ಸುನಿತಾ ಲಾಕ್ರ, ಗುರ್ಜಿತ್ ಕೌರ್, ಸುಶೀಲಾ ಚಾನು(ಉಪ ನಾಯಕಿ),ಮೊನಿಕಾ.

ಮಿಡ್‌ಫೀಲ್ಡರ್‌ಗಳು: ರೇಣುಕಾ ಯಾದವ್, ನಿಕ್ಕಿ ಪ್ರಧಾನ್, ನಮಿತಾ ಟೊಪ್ಪೊ, ನವಜೋತ್ ಕೌರ್, ರಿತು ರಾಣಿ, ಲಿಲಿಮಾ ಮಿಂಝ್.

ಫಾರ್ವರ್ಡ್‌ಗಳು: ರೀನಾ ಖೋಖರ್, ರಾಣಿ ರಾಂಪಾಲ್(ನಾಯಕಿ), ವಂದನಾ ಕಟಾರಿಯ, ಅನುಪಾ ಬಾರ್ಲ, ಪ್ರೀತಿ ದುಬೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News